
ನವದೆಹಲಿ(ನ.22): ರಾಷ್ಟ್ರಪತಿಗಳ ಅಧಿಕೃತ ನಿವಾಸವನ್ನು ವಾರದ 4 ದಿನ ಸಾರ್ವಜನಿಕರ ವೀಕ್ಷಕರಿಗೆ ತೆರೆಯಲು ನಿರ್ಧರಿಸಲಾಗಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಾರ್ವಜನಿಕರು ಭವನ ವೀಕ್ಷಿಸಬಹುದಾಗಿದೆ.
ಭವನ ವೀಕ್ಷಣೆಗೆ ನೋಂದಣಿ ಮಾಡಿಸಲು 50 ರು. ದರ ನಿಗದಿಪಡಿಸಲಾಗಿದೆ. 8 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. ಸರ್ಕಾರಿ ರಜಾದಿನಗಳ ಹೊರತು ಪಡಿಸಿ, ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ರಾಷ್ಟ್ರಪತಿ ಭವನ ವೀಕ್ಷಿಸಬಹುದಾಗಿದೆ.
ಭವನ ಪ್ರವೇಶಕ್ಕೆ ಆಗಮಿಸುವ ಭಾರತೀಯರು ಯಾವುದಾದರೂ ಒಂದು ಸರ್ಕಾರ ನೀಡಿದ ಗುರುತಿನ ಚೀಟಿ ಜತೆಯಿಟ್ಟುಕೊಂಡಿರಬೇಕು.
ಇದೀಗ ಜನರು ನಾಲ್ಕು ದಿನಗಳಲ್ಲಿ ಮೊದಲೇ ನಿರ್ಧರಿಸಿಕೊಂಡು ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಡಬಹುದಾಗಿದೆ. ರಾಷ್ಟ್ರಪತಿ ಭವನವು 200,000 ಚದರಡಿ ವಿಸ್ತೀರ್ಣ ಹೊಂದಿದ್ದು, ಒಟ್ಟು 340 ಕೋಣೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.