
ಹಾಸನದ ಲೇಡಿ ಕಿಲ್ಲರ್ಸ್ ಗ್ಯಾಂಗ್ ನ ಬಗ್ಗೆ ಕೆದಕುತ್ತಾ ಹೋದರೆ ನಿಮ್ಮನ್ನು ಬೆಚ್ಚಿ ಬೀಳಿಸೋ ಸಂಗತಿಗಳಿವೆ. ಆ ಗ್ಯಾಂಗ್ನಲ್ಲಿ ಅವಿದ್ಯಾವಂತರಿರಲಿಲ್ಲ, ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಓದುತ್ತಿದ್ದವರು ವಿದ್ಯಾರ್ಥಿನಿಯರಿದ್ದರು.
ವತ್ಸಲಾ, ಅಕ್ತರ್ ಉನ್ನೀಸಾ, ಸಣ್ಣಮ್ಮ ಅನ್ನೋರನ್ನು ಕೊಲೆ ಮಾಡಿದ ಹಾಸನದ ಲೇಡಿ ಕಿಲ್ಲರ್ಸ್ ಗ್ಯಾಂಗ್ನಲ್ಲಿ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿನಿ ಇದ್ದಾಳೆ. ಅವಳೇ ಈ ಶ್ರೀನಿಧಿ. ಇವಳು ಕಿಲ್ಲರ್ ಗ್ಯಾಂಗ್ ಲೀಡರ್ ರೂಪಾಳ ಅಕ್ಕನ ಮಗಳು. ಅಂದ್ರೆ ಪಾರ್ವತಿಯ ಮಗಳು. ಹಾಸನದ ಬೊಮ್ಮನಾಯಕನಹಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಪಾರ್ವತಿಯ ಮಗಳು ಈ ಶ್ರೀನಿಧಿ, ರಾಜೀವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನೀಯರಿಂಗ್ ಓದುತ್ತಿದ್ದಳು. ಮೂರು ಮಹಿಳೆಯರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರೋ ಶ್ರೀನಿಧಿ ಕೊಲೆ ಹಂತಕಿ ಅಲ್ಲದೇ ನಾಟಕಗಾತಿಯೂ ಹೌದು. ಯಾಕಂದರೆ ಕಾಲೇಜಿನಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಡೆದುಕೊಂಡಿದ್ದಳು. ಎರಡೂ ವರ್ಷಗಳಲ್ಲೂ ಫಸ್ಟ್ ರ‌್ಯಾಂಕ್ ಸ್ಟೂಡೆಂಟ್ ಆಗಿದ್ದಳು. ಶ್ರೀನಿಧಿ ಮೂರು ಕೊಲೆಗಳಲ್ಲಿ ಭಾಗಿಯಾಗಿರೋ ವಿಷಯ ಕಾಲೇಜಿನ ಪ್ರಾಧ್ಯಾಪಕರಿಗೆ ಶಾಕ್ ಆಗುವಂತೆ ಮಾಡಿದೆ.
ಮನೆಯವರೆ ಕೊಲೆಗಡುಕಿ ಮಾಡಿದ್ದರು
ಇಂಜಿನೀಯರಿಂಗ್ ಓದಿ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಗಳಿಸಬೇಕಾದ ಶ್ರೀನಿಧಿಯನ್ನು ಮನೆಯವರೇ ಕೊಲೆಗಡುಕಿ ಮಾಡಿದ್ದರು. ಫ್ಯಾಮಿಲಿ ಕಿಲ್ಲರ್ ಗ್ಯಾಂಗ್ ನಲ್ಲಿ ಶವ ಸಾಗಿಸೋ ಕೆಲಸ ಹಾಗೂ ಸಾಂದರ್ಭಿಕ ನಾಟಕ ಮಾಡುತ್ತಿದ್ದಳು ಇಂಜಿನಿಯರಿಂಗ್ ಸ್ಟೂಡೆಂಟ್ ಶ್ರೀನಿಧಿ. ಇವಳ ಪಾಪಕೃತ್ಯಗಳು ಅವಳ ನಿಕೃಷ್ಟ , ನಿಷ್ಕರುಣಿ ಮನಸ್ಥಿತಿಗೆ ಸಾಕ್ಷಿಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.