ಕೆಪಿಎಸ್`ಸಿ ನೇಮಕಾತಿ ರದ್ದು ಆದೇಶ ವಜಾಗೊಳಿಸಿದ ಕೆಎಟಿ, 362 ಅಭ್ಯರ್ಥಿಗಳಿಗೆ ಮತ್ತೆ ಕೆಲಸ

By suvarnanews web deskFirst Published Oct 19, 2016, 1:06 PM IST
Highlights

ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಸಿಐಡಿ ವರದಿ ಆಧರಿಸಿ ಎ ಮತ್ತು ಬಿ ಗ್ರೇಟ್​​ ಹುದ್ದೆಗಳ 362 ಅಭ್ಯರ್ಥಿಗಳ ನೇಮಕಾತಿ ಆದೇಶ ರದ್ದುಗೊಳಿಸಿ 2014ರಲ್ಲಿ ರಾಜ್ಯ ಸರ್ಕಾರ 2011ರ ಅಧಿಸೂಚನೆಯನ್ನೇ ರದ್ದುಪಡಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ನಿರ್ಧಾರ ವಿರೋಧಿಸಿ ಒಂದು ತಿಂಗಳ ಕಾಲ ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ನಂತರ ಕಾನೂನು ಹೋರಾಟಕ್ಕೆ ಅಭ್ಯರ್ಥಿಗಳು ಮುಂದಾಗಿದ್ದರು

ಬೆಂಗಳೂರು(ಅ.19): 2011ರ ಗೆಜೆಟೆಡ್​​ ಪ್ರೋಬೆಷನರಿ ಹುದ್ದೆ ನೇಮಕಾತಿ ರದ್ದು ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೆಎಟಿ ಇಂದು ವಜಾಗೊಳಿಸಿದೆ. ಇನ್ನೆರಡು ತಿಂಗಳಲ್ಲಿ ಎಲ್ಲ 362 ಅಭ್ಯರ್ಥಿಗಳಗೆ ನೇಮಕಾತಿ ಆದೇಶ ನೀಡುವಂತೆ ಆದೇಶಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಸಿಐಡಿ ವರದಿ ಆಧರಿಸಿ ಎ ಮತ್ತು ಬಿ ಗ್ರೇಟ್​​ ಹುದ್ದೆಗಳ 362 ಅಭ್ಯರ್ಥಿಗಳ ನೇಮಕಾತಿ ಆದೇಶ ರದ್ದುಗೊಳಿಸಿ 2014ರಲ್ಲಿ ರಾಜ್ಯ ಸರ್ಕಾರ 2011ರ ಅಧಿಸೂಚನೆಯನ್ನೇ ರದ್ದುಪಡಿಸಿ ಆದೇಶ ಹೊರಡಿಸಿತ್ತು.

362 ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ 2014 ಮಾರ್ಚ್ 21ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗದ ಅಭ್ಯರ್ಥಿ ಮೈತ್ರಿ ಎಂಬುವವರು ಅಕ್ರಮ ನಡೆದಿದೆ ಎಂದು ದೂರು ಕೊಟ್ಟಿದ್ದರು. ಈ ಬಗ್ಗೆ ವರದಿ ನೀಡಿದ ಸಿಐಡಿ ಸಹ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ ಆಗದೆ ಎಂದು ವರದಿ ನೀಡಿತ್ತು. ಇದರ ಆಧಾರದಲ್ಲಿ ಸರ್ಕಾರ ನೇಮಕಾತಿ ಆದೇಶ ರದ್ದು ಮಾಡಿತ್ತು. ಸರ್ಕಾರದ ನಿರ್ಧಾರ ವಿರೋಧಿಸಿ ಒಂದು ತಿಂಗಳ ಕಾಲ ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ನಂತರ ಕಾನೂನು ಹೋರಾಟಕ್ಕೆ ಅಭ್ಯರ್ಥಿಗಳು ಮುಂದಾಗಿದ್ದರು. ಅಭ್ಯರ್ಥಿಗಳ ಪರ ಹಿರಿಯ ವಕೀಲ ಬಿ.ವಿ. ಆಚಾರ್ಯ ವಾದಿಸಿ ಉದ್ಯೋಗ ವಂಚಿತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಕೆಎಟಿ ಆದೇಶಕ್ಕೆ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದು ಒಳ್ಳೆಯ ಹುದ್ದೆಗಳ ನಿರೀಕ್ಷೆಯಲ್ಲಿದ್ದಾರೆ.

click me!