ಶಂಕರ್ ಕಾಂಗ್ರೆಸ್ ಸೇರೋದು ಖಚಿತ : ಪಕ್ಕಾ ಆಯ್ತು ಸಚಿವ ಸ್ಥಾನ

By Web DeskFirst Published Jun 14, 2019, 12:17 PM IST
Highlights

ಕಾಂಗ್ರೆಸ್ ಸೇರೋದು ಖಚಿತ ಎಂದು ರಾಣೆಬೆನ್ನೂರು ಶಾಸಕ ಶಂಕರ್ ಹೇಳಿದ್ದಾರೆ. ಇದರಿಂದ ಅವರಿಗೆ ಕೈ ನಿಂದ ಸಚಿವ ಸ್ಥಾನ ಸಿಗುವುದು ಪಕ್ಕಾ ಆಗಿದೆ. 

ಬೆಂಗಳೂರು :  ತಾವು ಅಧಿಕೃತವಾಗಿ ಕಾಂಗ್ರೆಸ್ ಸೇರಲು ಸಜ್ಜು ಎಂದು ರಾಣೆಬೆನ್ನೂರು ಕೆಪಿಜೆಪಿ ಶಾಸಕ ಆರ್ ಶಂಕರ್ ಹೇಳಿದ್ದಾರೆ. 

ಸಚಿವ ಸ್ಥಾನ ಕೇಳುವುದು ನನ್ನ ಹಕ್ಕು, ಪಕ್ಷೇತರವಾಗಿ ಗೆದ್ದು ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಗೆ ನಾನು ನ್ಯಾಯ ಸಲ್ಲಿಸಬೇಕಿದೆ ಹಾಗಾಗಿ ನನಗೆ ಮಂತ್ರಿ ಸ್ಥಾನ ಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇ ಎಂದು ಶಂಕರ್ ಅಧಿಕೃತವಾಗಿ ಹೇಳಿದ್ದಾರೆ.

ಪಕ್ಷೇತರರು ಸಚಿವ ಸಂಪುಟ ಸೇರ್ಪಡೆಯಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುವ ಭರವಸೆ ಇದೆ. ಸಚಿವ ಸ್ಥಾನ ನೀಡುವುದರಿಂದ ತಾವು ಬಿಜೆಪಿಗೆ ಹೋಗುವ ಮಾತೇ ಇಲ್ಲ. ಯಾವುದೇ ಖಾತೆ ನೀಡಿದರೂ ಕೂಡ ನಿಭಾಯಿಸುತ್ತೇನೆ.  ತಮಗೆ ಒಳ್ಳೆಯ ಖಾತೆಯನ್ನು ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದರು. 

ಈ ಬಾರಿಯೂ ಜೆಡಿಎಸ್ ನಾಯಕನ ಆಸೆಗೆ ತಣ್ಣೀರು : ಪಕ್ಷೇತರ ಶಾಸಕಗೆ ಸಚಿವ ಸ್ಥಾನ

ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ. ಸುಭದ್ರವಾಗಿ ಐದು ವರ್ಷ ಆಡಳಿತ ಪೂರೈಸುತ್ತದೆ ಎಂದು ಶಂಕರ್ ಭರವಸೆ ವ್ಯಕ್ತಪಡಿಸಿದರು.  

ಮತ್ತೊಬ್ಬ ಜೆಡಿಎಸ್ ಶಾಸಕನ ಸ್ಥಾನಕ್ಕೆ ಬೀಳುತ್ತಾ ಕೊಕ್?

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೀಗ ಕಾಂಗ್ರೆಸ್ ನಿಂದ ಓರ್ವ ವ್ಯಕ್ತಿಗೆ ಹಾಗೂ ಜೆಡಿಎಸ್ ನಿಂದ ಓರ್ವ ಶಾಸಕಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಎರಡೂ ಪಕ್ಷದಿಂದಲೂ ಕೂಡ ಪಕ್ಷದ ಹೊರಗಿನವರನ್ನೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. 

click me!