ಈ ಬಾರಿಯೂ ಜೆಡಿಎಸ್ ನಾಯಕನ ಆಸೆಗೆ ತಣ್ಣೀರು : ಪಕ್ಷೇತರ ಶಾಸಕಗೆ ಸಚಿವ ಸ್ಥಾನ

By Web DeskFirst Published Jun 14, 2019, 11:45 AM IST
Highlights

ಈ ಬಾರಿಯೂ ಕೂಡ ಸಚಿವ ಸ್ಥಾನ ಪಡೆಯುವ ಜೆಡಿಎಸ್ ನಾಯಕನ ಆಸೆಗೆ ತಣ್ಣೀರು ಎರಚಿದಂತಾಗಿದೆ. ಆದರೆ ಜೆಡಿಎಸ್ ನಿಂದ ಪಕ್ಷೇತರ ವ್ಯಕ್ತಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. 

ಬೆಂಗಳೂರು (ಜೂ.14) : ಈ ಬಾರಿಯೂ ಜೆಡಿಎಸ್ ಮುಖಂಡ ಬಿಎಂ ಫಾರೂಕ್ ಗೆ ಸಚಿವ ಸ್ಥಾನ ಕೈ ತಪ್ಪಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ನಾಯಕಗೆ ನಿರಾಸೆಯಾಗಿದೆ. 

ಬೆಳ್ಳಂಬೆಳಗ್ಗೆ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಪಕ್ಷ ಸಂಕಷ್ಟದಲ್ಲಿದ್ದು,  ಈ ವೇಳೆ ನಿಮ್ಮ ಸಹಕಾರ ಅಗತ್ಯ ಎಂದು ಫಾರೂಕ್ ಬಳಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 

ಹೀಗಾಗಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಫಾರೂಕ್ ಆಸೆಗೆ ತಣ್ಣೀರು ಎರಚಿದಂತಾಗಿದೆ. ಆದ್ದರಿಂದ ಈ ಬಾರಿಯೂ ಕೂಡ ಜೆಡಿಎಸ್ ನಿಂದ ಅಲ್ಪಸಂಖ್ಯತರಿಗೆ ಮಂತ್ರಿ ಸ್ಥಾನ ತಪ್ಪಿದಂತಾಗಿದೆ. 

ಮತ್ತೊಬ್ಬ ಜೆಡಿಎಸ್ ಶಾಸಕನ ಸ್ಥಾನಕ್ಕೆ ಬೀಳುತ್ತಾ ಕೊಕ್?

ಈ ಹಿಂದೆ ಅಲ್ಪಸಂಖ್ಯಾತರಾದ ಬಿಎಂ ಫಾರೂಕ್ ಅವರನ್ನು ಮಂತ್ರಿ ಮಾಡಲು ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡರು ಬಯಸಿದ್ದರು. ಆದರೆ ಈಗ ಪಕ್ಷದಲ್ಲಿ ಹಲವು ರೀತಿಯ ಸಮಸ್ಯೆಗಳಿದ್ದು, ತಾಳ್ಮೆಯಿಂದ ಇರಿ ಎಂದು ಸಿಎಂ ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ. 

ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ : ಇಬ್ಬರಿಗೆ ಸಚಿವ ಸ್ಥಾನ

ಇಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಪಕ್ಷೇತರ ಶಾಸಕರಾಗಿರುವ ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡಲು ಜೆಡಿಎಸ್ ನಿಂದ ನಿರ್ಧರಿಸಲಾಗಿದೆ.

click me!