
ಬೆಂಗಳೂರು[ಸೆ.10]: ಪೆಟ್ರೋಲ್ ದರ ಏರಿಕೆ, ಇಳಿಕೆ ಸಂಬಂಧ ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಲೇವಡಿ ರೀತಿಯಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ತಮ್ಮ ಟ್ವಿಟರ್ ಪುಟದಲ್ಲಿ ಚಿತ್ರನಟ ಅಮೀರ್ ಖಾನ್ ಫೋಟೋ ಬಳಸಿ ಯುಪಿಎ ಅವಧಿಯಲ್ಲಿ ಸಣ್ಣಗಿದ್ದ ಫೋಟೊ, ಎನ್ ಡಿಎ ಅವಧಿಯಲ್ಲಿ ದಪ್ಪಗಿರುವ ಚಿತ್ರವನ್ನು ಪ್ರಕಟಿಸಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ದುಬಾರಿಯಾಯ್ತು ಮೋದಿ ಸರ್ಕಾರ ಎಂಬ ಆ್ಯಶ್ ಟ್ಯಾಗ್ ಕೂಡ ನೀಡಿದ್ದಾರೆ.
ಪೆಟ್ರೋಲ್ ವಿಚಾರದಲ್ಲಿ ಮೋದಿ ವಿರೋಧಿಸಲು ಅಮೀರ್ ಎಳೆತಂದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ದಂಗಲ್ ಸಿನಿಮಾಕ್ಕಾಗಿ ಅಮೀರ್ ಖಾನ್ ಈ ಫೋಟೊ ಬಳಸಿದ್ದರು. ಇದಲ್ಲದೆ ತಮ್ಮ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಣಕಿಸಿ ಹಲವು ಟ್ವೀಟ್ ಗಳನ್ನು ಪೋಸ್ಟ್ ಮಾಡಿರುವುದನ್ನು ಕಾಣಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.