ಥ್ಯಾಂಕ್ಯೂ ಸುಪ್ರೀಂ: ಹಸೆಮಣೆ ಏರಲಿದ್ದಾರೆ ಮೊದಲ ತೃತೀಯ ಲಿಂಗಿ ಆಫೀಸರ್!

By Web DeskFirst Published Sep 10, 2018, 3:13 PM IST
Highlights

ಸಲಿಂಗ ಕಾಮ ಅಪರಾಧವಲ್ಲ ಎಂದ ಸುಪ್ರೀಕೋರ್ಟ್! ಮದುವೆಯಾಗಲು ಸಜ್ಜಾಗಿದ್ದಾರೆ ತೃತೀಯ ಲಿಂಗಿ ಅಧಿಕಾರಿ! ಒಡಿಶಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಐಶ್ವರ್ಯ! ತಮ್ಮ ಬಾಯ್‌ಫ್ರೆಂಡ್ ಜೊತೆ ಮದುವೆಯಾಗಲು ಮುಂದಾದ ಐಶ್ವರ್ಯ

ಭುವನೇಶ್ವರ್(ಸೆ.10): ಸಲಿಂಗ ಕಾಮ ಅಪರಾಧ ಅಲ್ಲ ಎಂಬ ಸುಪ್ರೀಂಕೋರ್ಟ್ ಆದೇಶ, ದೇಶದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಒಡಿಶಾದ ಮೊದಲ ತೃತೀಯಲಿಂಗಿ ಅಧಿಕಾರಿಯೊಬ್ಬರು ಮದುವೆಗೆ ಸಜ್ಜಾಗುತ್ತಿದ್ದಾರೆ.

ಐಶ್ವರ್ಯ ಎಂಬ ತೃತೀಯ ಲಿಂಗಿ ಒಡಿಶಾದ ಮೊದಲ ತೃತೀಯ ಲಿಂಗಿ ಅಧಿಕಾರಿ. ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಐಶ್ವರ್ಯ, ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಶ್ವರ್ಯ, ಸುಪ್ರೀಂಕೋರ್ಟ್ ತೀರ್ಪು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಕ್ಕೆ ಸಂದ ಜಯವಾಗಿದ್ದು, ತಾವೂ ಕೂಡ ತಮ್ಮ ಬಹುಕಾಲದ ಗೆಳೆಯನೊಂದಿಗೆ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

ತಮಗೊಬ್ಬ ಬಾಯ್‌ಫ್ರೆಂಡ್ ಇರುವುದಾಗಿ ಹೇಳಿರುವ ಐಶ್ವರ್ಯ, ಸುಪ್ರೀಕೋರ್ಟ್ ತೀರ್ಪಿನಿಂದ ನಾವು ಮದುವೆಯಾಗುವ ಆಸೆ ಚಿಗುರೊಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

2010 ರಲ್ಲಿ ಒಡಿಶಾದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದ ಐಶ್ವರ್ಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

click me!