
ಮಂಡ್ಯ (ನ.15): ಸಕ್ಕರೆ ನಾಡು ಮಂಡ್ಯದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನವೇ ರಾಜಕೀಯ ಅಖಾಡ ರಂಗೇರುತ್ತಿದೆ. ಜಿಲ್ಲೆಯಲ್ಲಿ ರಾಜಕೀಯ ಚಟುವಟಿಗಳು ಗರಿಗೆದರಿದ್ದು, ಸಧ್ಯ ಮಂಡ್ಯದಲ್ಲಿ ರೆಬಲ್ ಸ್ಟಾರ್'ಗೆ ಟ್ರಬಲ್ ಆಗಿ ರಮ್ಯಾ ಎಂಟ್ರಿ ಕೊಡುತ್ತಿದ್ದಾರೆ.
ಮಾಜಿ ಸಂಸದೆ ರಮ್ಯಾ ಮಂಡ್ಯಕ್ಕೆ ಎಂಟ್ರಿಯಾಗುತ್ತಿರುವ ಸುದ್ದಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್'ನಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದೆ. ರಮ್ಯಾ ಮಂಡ್ಯಕ್ಕೆ ಅಭ್ಯರ್ಥಿಯಾಗ್ತಾರೆ ಅನ್ನೋ ವಿಷಯ, ಹಾಲಿ ಶಾಸಕ ರೆಬಲ್ ಸ್ಟಾರ್ ಅಂಬರೀಶ್ ಗೆ ಈಗ ಟ್ರಬಲ್ ಆಗಿದೆ. ಮಂಡ್ಯ ಕ್ಷೇತ್ರದ ಟಿಕೇಟ್ ಗಾಗಿ ಅಂಬಿ ಮತ್ತು ರಮ್ಯ ನಡುವೆ ಪೈಪೋಟಿ ಆರಂಭವಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ 6 ತಿಂಗಳು ಬಾಕಿ ಇರುವಾಗಲೇ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ರಾಜಕೀಯ ಅಖಾಡ ರಂಗೇರ್ತಿದೆ. ಅದರಲ್ಲೂ ಮಂಡ್ಯದ ಕಾಂಗ್ರೆಸ್'ನಲ್ಲಿ ಈಗ ಟಿಕೆಟ್'ಗಾಗಿ ಇಬ್ಬರು ಸ್ಟಾರ್ಗಳ ನಡುವೆ ವಾರ್ ಶುರುವಾಗಿದೆ. ಮಾಜಿ ಸಂಸದೆ ರಮ್ಯಾ ಈಗ ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಮಾತುಗಳು ಕೇಳಿ ಬರ್ತಿದ್ದು, ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗ್ತಾರೆ ಅನ್ನೋ ಮಾತು ಭಾರೀ ಸಂಚಲನ ಉಂಟುಮಾಡಿದೆ.
ಮಂಡ್ಯದಲ್ಲಿ ರೆಬಲ್ ಸ್ಟಾರ್ ಅಂಬಿ ಹವಾ ಜೋರಾಗಿದೆ. ಆದರೆ ಹಾಲಿ ಶಾಸಕ ಅಂಬರೀಶ್ ರಾಜಕೀಯ ಬದುಕಿಗೆ ರಮ್ಯಾ ಎಂಟ್ರಿ ಮುಳುವಾಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ಅಲ್ಲದೇ ಕ್ಷೇತ್ರದಲ್ಲಿ ರಮ್ಯಾ ಅಭಿಮಾನಿಗಳು ರಮ್ಯಾ ಪ್ರವೇಶವನ್ನು ಮುಕ್ತವಾಗಿ ಸ್ವಾಗತಿಸಿದ್ದು , ಕ್ಷೇತ್ರಕ್ಕೆ ರಮ್ಯಾ ಅವಶ್ಯಕತೆ ಇದೆ ಅಂತಿದ್ದಾರೆ. ಇನ್ನು ರಾಜ್ಯ ರಾಜಕಾರಣಕ್ಕೆ ಮಾಜಿ ಸಂಸದೆ ರಮ್ಯಾ ಬರುವುದು ಬಹುತೇಕ ಖಚಿತವಾದಂತಿದೆ. ಯಾಕಂದ್ರೆ ಚುನಾವಣೆಗೂ ಮುನ್ನವೇ ರಮ್ಯಾ ಮಂಡ್ಯದ ವಿದ್ಯಾನಗರದಲ್ಲಿ ಸ್ವಂತ ಮನೆ ಖರೀದಿಸಿರೋದು ಇದಕ್ಕೆ ಪುಷ್ಠಿ ನೀಡುತ್ತಿದೆ. ಅಲ್ಲದೇ ಈಗಾಗಲೇ ಎಐಸಿಸಿಯ ಮಾಧ್ಯಮ ವಿಭಾಗದ ಮುಖ್ಯಸ್ಥೆಯಾಗಿರೋ ರಮ್ಯಾ, ಪಕ್ಷದ ವರಿಷ್ಠರ ಮಟ್ಟದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಮನವೊಲಿಸಿ ಮಂಡ್ಯ ಕ್ಷೇತ್ರದ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದ್ದಾರೆ.
ಮಂಡ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿಯಾಗ್ತಿರೋ ಸುದ್ದಿ ತಿಳಿಯುತ್ತಿದ್ದಂತೆ, ಕ್ಷೇತ್ರ ಮರೆತು ಬೆಂಗಳೂರಿನಲ್ಲಿದ್ದ ಶಾಸಕ ಅಂಬರೀಶ್ ರಾತ್ರೋ ರಾತ್ರಿ ಮಂಡ್ಯಕ್ಕೆ ಆಗಮಿಸಿದರು. ಜಿಲ್ಲೆಯ ಹಿರಿಯ ಮುತ್ಸದ್ದಿ ಜಿ. ಮಾದೇಗೌಡರನ್ನು ತನ್ನ ಆಪ್ತ ಅಮರಾವತಿ ಚಂದ್ರಶೇಖರ್ ಮನೆಗೆ ಕರೆಸಿಕೊಂಡು ರಹಸ್ಯ ಮಾತುಕತೆ ನಡೆಸಿದ್ದಾರೆ. ಅಲ್ದೆ ತಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಮ್ಮ ಮನಸ್ಸಿನ ಆಸೆಯನ್ನು ಬಿಚ್ಚಿಟ್ಟಿದ್ದು, ಹೈಕಮಾಂಡ್ ಆದೇಶದಂತೆ ತಾನು ಕೂಡ ಮಂಡ್ಯದಲ್ಲಿ ಸ್ಪರ್ಧಿಸುತ್ತೇನಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.