ರಮ್ಯಾ ಪೇಸ್ಬುಕ್ ಪೋಸ್ಟ್'ಗೆ ಗರಂ ಆದ ಶಿಲ್ಪಾ ಗಣೇಶ್!: ಮತ್ತೆ ಸ್ಟಾರ್ ವಾರ್!

Published : Aug 08, 2017, 08:50 AM ISTUpdated : Apr 11, 2018, 01:12 PM IST
ರಮ್ಯಾ ಪೇಸ್ಬುಕ್ ಪೋಸ್ಟ್'ಗೆ ಗರಂ ಆದ ಶಿಲ್ಪಾ ಗಣೇಶ್!: ಮತ್ತೆ ಸ್ಟಾರ್ ವಾರ್!

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾಗಿದೆ. ಸ್ಯಾಂಡಲ್‌ವುಡ್‌‌ ನಟಿ ರಮ್ಯಾ ವಿರುದ್ಧ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ ಶಿಲ್ಪಾ ಮತ್ತೆ ಫೇಸ್​ಬುಕ್​ ವಾರ್‌ ಶುರು ಮಾಡಿದ್ದಾರೆ. ಮಾಜಿ ಸಂಸದೆ ರಮ್ಯಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಗಳಿ, ಪ್ರಧಾನಿ ಮೋದಿಯನ್ನು ತೆಗಳಿ ಟ್ವೀಟ್ ಮಾಡಿದ್ದಕ್ಕೆ ಶಿಲ್ಪಾ ಕಿಡಿಕಾರಿದ್ದಾರೆ.

ಬೆಂಗಳೂರು(ಆ.08): ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾಗಿದೆ. ಸ್ಯಾಂಡಲ್‌ವುಡ್‌‌ ನಟಿ ರಮ್ಯಾ ವಿರುದ್ಧ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ ಶಿಲ್ಪಾ ಮತ್ತೆ ಫೇಸ್​ಬುಕ್​ ವಾರ್‌ ಶುರು ಮಾಡಿದ್ದಾರೆ. ಮಾಜಿ ಸಂಸದೆ ರಮ್ಯಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಗಳಿ, ಪ್ರಧಾನಿ ಮೋದಿಯನ್ನು ತೆಗಳಿ ಟ್ವೀಟ್ ಮಾಡಿದ್ದಕ್ಕೆ ಶಿಲ್ಪಾ ಕಿಡಿಕಾರಿದ್ದಾರೆ.

ರಾಹುಲ್ ಹೊಗಳಿ, ಪ್ರಧಾನಿ ಮೋದಿಯನ್ನು ತೆಗಳಿ ಟ್ವೀಟ್

ಕಾಂಗ್ರೆಸ್​'ನ ಸಾಮಾಜಿಕ ಮಾಧ್ಯಮದ ಉಸ್ತುವಾರಿ ನಟಿ, ಮಾಜಿ ಸಂಸದೆ ರಮ್ಯಾ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಗಳಿ, ಪ್ರಧಾನಿ ನರೇಂದ್ರ ಮೋದಿಯನ್ನು ತೆಗಳಿ ಟ್ವೀಟ್ ಮಾಡಿ, ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಗಸ್ಟ್  5ರಂದು ರಮ್ಯಾ, ರಾಹುಲ್ ಗಾಂಧಿ ‘ಪೀಪಲ್ಸ್​ ಲೀಡರ್’ ಹಾಗೂ ಪ್ರಧಾನಿ ಮೋದಿ ‘ಸೀಟ್ ಬೆಲ್ಟ್​ ಲೀಡರ್’ ಎಂದು ಟೀಕಿಸಿ ಫೇಸ್​'ಬುಕ್'​ನಲ್ಲಿ  ಫೋಟೋ ಪೋಸ್ಟ್ ಮಾಡಿದ್ದರು.

ರಮ್ಯಾ ಎಫ್‍ಬಿ' ಪೋಸ್ಟ್​'ಗೆ ಶಿಲ್ಪಾ ಗಣೇಶ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಗುಜರಾತಿನ ತಮ್ಮದೇ ಪಕ್ಷದ ಶಾಸಕರನ್ನು ಬೆಂಗಳೂರಿನಲ್ಲಿ ಮೋಜು ಮಾಡಲು ಕಳುಹಿಸಿ ತಾವು ಭಾರಿ ಸಭ್ಯರಂತೆ ಜನರೆದುರು ಬಂದು ಮೊಸಳೆ ಕಣ್ಣೀರು ಸುರಿಸಿದರೆ ಅದನ್ನು ನಂಬಲು ಜನ ಮೂರ್ಖರಲ್ಲ. ನಿಮ್ಮ ರಾಹುಲ್​'ರವರು ನಿಜವಾದ ಪ್ರವಾಹ ಸಂತ್ರಸ್ತರ ಜೊತೆಗೆ ಕುಳಿತು ಮಾತಾಡಿದ್ದಾರೆ ಎನ್ನಲು ಯಾವುದೇ ಸಾಕ್ಷಿ ಇಲ್ಲ. ನಿಮ್ಮದೇ ಮಂಡ್ಯದಲ್ಲಿ ರಾಹುಲ್ ಭೇಟಿಯಾದಾಗ ತಾವು ಸೃಷ್ಟಿಸಿದ ನಕಲಿ ರೈತರ ಕಥೆ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ ಎಂದು ಬರೆಯುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ನಲ್ಲಿ ಇಬ್ಬರೂ ನಾಯಕಿಯರ ಕೋಲ್ಡ್​ ವಾರ್​ ಮತ್ತೆ ಶುರುವಾಗಿದೆ. ಶಿಲ್ಪಾ ಗಣೇಶ್ ಟಾಂಗ್​ಗೆ ರಮ್ಯಾ ಇನ್ನೇನ್ ಪ್ರತಿಕ್ರಿಯೆ ಕೊಡುತ್ತಾರೋ ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!