ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಗೆ ರಮೇಶ್ ಕುಮಾರ್ ವ್ಯಂಗ್ಯ

Published : Jan 02, 2017, 04:11 PM ISTUpdated : Apr 11, 2018, 01:12 PM IST
ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಗೆ ರಮೇಶ್ ಕುಮಾರ್ ವ್ಯಂಗ್ಯ

ಸಾರಾಂಶ

ಈ ಇಳಿವಯಸ್ಸಿನಲ್ಲಿ ಅವರಿಗೆ ಇದು ಬೇಕಿತ್ತಾ? ಎಂದು ಪ್ರಶ್ನಿಸಿರುವ ರಮೇಶ್ ಕುಮಾರ್, ಶ್ರೀನಿವಾಸ್​ ಪ್ರಸಾದ್​ ಹೋಗಿರುವುದಾದರೂ ಎಲ್ಲಿಗೆ?  ಉಪಚುನಾವಣೆ ಗೆಲ್ಲುವುದಷ್ಟೇ ಅವರಿಗೆ ಮುಖ್ಯವೇ?   ಅಲ್ಲದೇ, ಆತ್ಮಗೌರವ ಇಲ್ಲದ ಮೇಲೆ ಏನು ಸಿಕ್ಕಿದರು ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು (ಜ.02): ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಯಾಗಿರುವ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. 

ಈ ಇಳಿವಯಸ್ಸಿನಲ್ಲಿ ಅವರಿಗೆ ಇದು ಬೇಕಿತ್ತಾ? ಎಂದು ಪ್ರಶ್ನಿಸಿರುವ ರಮೇಶ್ ಕುಮಾರ್, ಶ್ರೀನಿವಾಸ್​ ಪ್ರಸಾದ್​ ಹೋಗಿರುವುದಾದರೂ ಎಲ್ಲಿಗೆ?  ಉಪಚುನಾವಣೆ ಗೆಲ್ಲುವುದಷ್ಟೇ ಅವರಿಗೆ ಮುಖ್ಯವೇ?   ಅಲ್ಲದೇ, ಆತ್ಮಗೌರವ ಇಲ್ಲದ ಮೇಲೆ ಏನು ಸಿಕ್ಕಿದರು ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.

ಪ್ರಸಾದ್ ಬಗ್ಗೆ ನನಗೆ ಅಪಾರ ಗೌರವ ಇದೆ,  ಅಲ್ಲದೇ ಅಸ್ಪೃಶ್ಯತೆಯನ್ನು ಸರಿ ಎನ್ನುವ,  ಸನಾತನ ಧರ್ಮ ಪ್ರತಿಪಾದಿಸುವ,  ಶ್ರೇಣೀಕೃತ ವ್ಯವಸ್ಥೆ ಇರುವ ಪಕ್ಷಕ್ಕೆ ಹೋಗಿದ್ದಾರೆ,  ಆತ್ಮ ಗೌರವ ಕಳೆದುಕೊಂಡರೆ ಪ್ರಪಂಚವೇ ಸಿಕ್ಕಿದರೆ ಪ್ರಯೋಜನವೇನು? ಎಂದು ಕಟುವಾಗಿ ಟೀಕಿಸಿದ್ದಾರೆ.

ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರಿರುವುದರಿಂದ ದಲಿತ ಸಮುದಾಯ ಹಾಗು ನಂಜನಗೂಡು ಕ್ಷೇತ್ರಕ್ಕೆ ಏನಾದರೂ ಪ್ರಯೋಜನವಿದೆಯೇ ಎಂದು ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಪಿಕ್‌ನಿಕ್ ಹೊರಟ ಶಾಲಾ ವಿದ್ಯಾರ್ಥಿಗಳ ಬಸ್ ಅಪಘಾತ, ಹಲವರಿಗೆ ಗಾಯ
ವರ್ಷಾಂತ್ಯ, ಹೊಸವರ್ಷದ ಸಂಭ್ರಮ ಹಾಳು ಮಾಡುವ ಘೋರ ದುರಂತಗಳು, ಡಿಸೆಂಬರ್‌-ಜನವರಿಯಲ್ಲೇ ಅಪಘಾತ ಆಗೋದ್ಯಾಕೆ?