
ರಾಮನಗರ(ನ. 08): ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ಇಂದಿಗೆ ವರ್ಷವಾಗಿದೆ. ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣ ಕ್ರಮದ ನಂತರ ಡಿಜಿಟಲೀಕರಣಕ್ಕೆ ಮುಂದಾಯ್ತು. ಆ ಮೂಲಕ ಕ್ಯಾಶ್'ಲೆಸ್ ವಹಿವಾಟುಗಳಿಗೆ ಪ್ರಾತಿನಿಧ್ಯ ನೀಡಲಾಯ್ತು. ಈ ನಿಟ್ಟಿನಲ್ಲಿ ಇದೀಗ ರಾಮನಗರ ಜಿಲ್ಲೆಯ ಕುಗ್ರಾಮವೊಂದು ಕ್ಯಾಶ್'ಲೆಶ್ ವಿಲೇಜ್ ಆಗಿ ಪರಿವರ್ತನೆಗೊಂಡಿದೆ. ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಗ್ರಾಮದ ಎಲ್ಲರೂ ಚಾಲ್ತಿ ಖಾತೆ ತೆರೆದಿದ್ದು, ಆಧಾರ್ ಲಿಂಕ್ ಪಡೆದು ತಮ್ಮ ಖಾತೆಯನ್ನು ನಿಭಾಯಿಸ್ತಾ ಇದ್ದಾರೆ. ಆ ಮೂಲಕ ಜಿಲ್ಲೆಯ ಮೊದಲ ಕ್ಯಾಶ್‌ಲೆಸ್ ವಿಲೇಜ್ ಆಗಿ ವಂದಾರಗುಪ್ಪೆ ಗ್ರಾಮ ಪರಿವರ್ತನೆಯಾಗಿದೆ. ಬ್ಯಾಂಕ್ ಆಫ್ ಬರೋಡಾ ಡಿಜಿಟಲೀಕರಣಕ್ಕೆ ಜಿಲ್ಲೆಯಲ್ಲಿ ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಇದೀಗ ಒಂದು ವರ್ಷದಲ್ಲಿ ಹಲವಾರು ಬದಲಾವಣೆಯನ್ನ ತಂದಿದ್ದು ಡಿಜಿಟಲ್ ಗ್ರಾಮವನ್ನಾಗಿಸುವಲ್ಲಿ ಸಫಲವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.