ಗೌಡರ ಸೊಸೆಯರ ಕೈ ಸಾಲದ ಲೆಕ್ಕ, ಸಿಎಂ ಪತ್ನಿಗೂ ಸಾಲ ಕೊಟ್ಟ ಅಕ್ಕನ್ಯಾರು?

By Web Desk  |  First Published Oct 16, 2018, 7:28 PM IST

ರಾಮನಗರ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ತಮ್ಮ ಆಸ್ತಿ ಮೊತ್ತವನ್ನು ಘೋಷಿಸಿಕೊಂಡಿದ್ದಾರೆ. ಈ ವೇಳೆ ಅವರು ಸಿಎಂಗಿಂತಲೂ ಶ್ರೀಮಂತೆ ಎನ್ನುವ ವಿಚಾರ ತಿಳಿದು ಬಂದಿದೆ. ಅನಿತಾ ಬಳಿ  ಹಾರ್ಲೆ ಡೇವಿಡ್ಸನ್‌ ಬೈಕ್‌ ಸಹ ಇದೆ. ಆದರೆ ಅನಿತಾ ಕುಟುಂಬ ಸದಸ್ಯರ ಬಳಿ ಸಾಕಷ್ಟು ಕೈ ಸಾಲ ಮಾಡಿಕೊಂಡಿದ್ದಾರೆ.


ರಾಮನಗರ[ಅ.16)  ಸಿಎಂ ಕುಮಾರಸ್ವಾಮಿ ಅವರಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೆಚ್ಚು ಸಿರಿವಂತೆ. ಆದರೆ ಸಾಲವನ್ನು  ಮಾಡಿಕೊಂಡಿದ್ದಾರಂತೆ. ಹಾಗಾದರೆ ಏನಿದು ಕೂತುಹಲಕಾರಿ ಮಾಹಿತಿ ಇಲ್ಲಿದೆ ಒಂದು ವಿವರ.

ಸಿಎಂ ಗಿಂತ ಪತ್ನಿ ಸಿರಿವಂತೆ : ಅನಿತಾ ಕುಮಾರಸ್ವಾಮಿ ಆಸ್ತಿ ಮೊತ್ತವೆಷ್ಟು..?

ಅನಿತಾ ಕುಮಾರಸ್ವಾಮಿ ಕುಟುಂಬ ಸದಸ್ಯರಿಂದ ಪಡೆದುಕೊಂಡ ಕೈ ಸಾಲದ ವಿವರ
ಭವಾನಿ ರೇವಣ್ಣ [ಓರಗೆ ಅಕ್ಕ] 3,26,565 ರೂ.
ಎಚ್‌.ಡಿ ಕುಮಾರಸ್ವಾಮಿ [ಗಂಡ] 14,51,633 ರೂ.
ಎಚ್‌.ಡಿ.ರಮೇಶ್‌[ಭಾವ] 1,00,97,000 ರೂ.

Tap to resize

Latest Videos

ತಮ್ಮ ಬಳಿ ಮುಕ್ಕಾಲು ಕೆಜಿ ಚಿನ್ನ, 12.5 ಕೆಜಿ ಬೆಳ್ಳಿ ಹಾಗೂ 4 ಕ್ಯಾರೆಟ್‌ ವಜ್ರ ಇದೆ ಎಂದೂ ಅನಿತಾ ಘೋಷಿಸಿದ್ದಾರೆ. ಅವರ ಬಳಿ ಅಮೆರಿಕದ ಹಾರ್ಲೆ ಡೇವಿಡ್ಸನ್‌ ಬೈಕ್‌ ಕೂಡ ಇರುವುದು ವಿಶೇಷ.

 

click me!