
ಬೆಂಗಳೂರು(ಸೆ.02): ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಂದಿಲ್ಲೊಂದು ಗೊಂದಲಗಳು ಸೃಷ್ಟಿಯಾಗ್ತಾನೇ ಇರ್ತಾವೆ. ಸಂಪುಟ ವಿಸ್ತರಣೆ ಗೊಂದಲ ಬಗೆಹರಿಯಿತು ಎನ್ನುವಷ್ಟರಲ್ಲಿ ಇದೀಗ ಮತ್ತೊಂದು ಗೊಂದಲ ಶುರುವಾಗಿದೆ.
ಆರಂಭದಿಂದಲೂ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಬಗ್ಗೆ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ಸಾಕಷ್ಟು ಅಸಮಾಧಾನಗಳಿವೆ. ಹಾಗಿದ್ದಾಗಲೂ ಸಿಎಂ ಕೆಂಪಯ್ಯರನ್ನ ಮುಂದುವರೆಸಿದ್ದಾರೆ. ಇದೀಗ ರಾಮಲಿಂಗಾರೆಡ್ಡಿಗೆ ಸಾರಿಗೆ ಇಲಾಖೆ ಬದಲಾಗಿ ಗೃಹ ಖಾತೆಯನ್ನು ಸಿಎಂ ವಹಿಸಿದ್ದಾರೆ. ಆದ್ರೆ ರಾಮಲಿಂಗಾರೆಡ್ಡಿ ಗೃಹ ಇಲಾಖೆಯನ್ನೇನೂ ಖುಷಿಯಿಂದ ಒಪ್ಪಿಕೊಂಡಿಲ್ಲ. ಗೃಹ ಇಲಾಖೆ ಜವಾಬ್ದಾರಿ ವಹಿಸಿ ಕೆಲ ಗಂಟೆಗಳಲ್ಲಿಯೇ ರಾಮಲಿಂಗಾರೆಡ್ಡಿ ಸಿಎಂ ಮುಂದೆ ಬೇಡಿಕೆಯಿಟ್ಟಿದ್ದಾರೆ. , ಕೆಂಪಯ್ಯರನ್ನ ಗೃಹ ಇಲಾಖೆಯಿಂದ ಮುಕ್ತಗೊಳಿಸಿ ಅನ್ನೋ ಬೇಡಿಕೆಯನ್ನು ಸಿಎಂ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ.
ಗೃಹ ಇಲಾಖೆ ಜವಾಬ್ದಾರಿ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಕೆಂಪಯ್ಯ ಇದ್ದರೆ ಸ್ವಾತಂತ್ರವಾಗಿ ಇಲಾಖೆ ನಿಭಾಯಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಕೆಂಪಯ್ಯ ಹಸ್ತಕ್ಷೇಪ ಇಲಾಖೆಯಲ್ಲಿ ಬೇಡ. ಅನ್ನೋ ಮಾತನ್ನು ರಾಮಲಿಂಗಾರೆಡ್ಡಿ ದೂರವಾಣಿ ಮೂಲಕ ಸಿಎಂಗೆ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಕೂಡ ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಖಾತೆ ವಹಿಸಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ರಾಮಲಿಂಗಾರೆಡ್ಡಿಗೆ ಹೇಳಿದ್ದರು. ಆದ್ರೆ ಕೆಂಪಯ್ಯ ಹಸ್ತಕ್ಷೇಪದಿಂದ ಗೃಹಖಾತೆ ನಿರಾಕರಿಸಿದ್ದರು.ಇದೀಗ ಮತ್ತೆ ಕೆಂಪಯ್ಯರಿಂದ ಇಲಾಖೆಗೆ ಮುಕ್ತಿ ಬೇಕು ಅಂತಾ ಸಿಎಂ ಮುಂದೆ ಬೇಡಿಕೆಯಿಟ್ಟಿದ್ದಾರೆ. ರಾಮಲಿಂಗಾರೆಡ್ಡಿ ಅವರ ಈ ಮಾತು ಸಿಎಂಗೆ ಅಚ್ಚರಿ ತಂದಿದೆ. ಎಷ್ಟೇ ಆಕ್ಷೇಪ ವ್ಯಕ್ತವಾದಾಗಲೂ ಕೆಂಪಯ್ಯರನ್ನು ಇಲಾಖೆಯಿಂದ ಮುಕ್ತಗೊಳಿಸಿರಲಿಲ್ಲ. ಇದೀಗ ರಾಮಲಿಂಗಾರೆಡ್ಡಿ ಬೇಡಿಕೆಗೆ ಸಿದ್ದರಾಮಯ್ಯ ಯಾವ ರೀತಿ ಸ್ಪಂದಿಸಲಿದ್ದಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.