
ಬೆಂಗಳೂರು (ಮಾ.30): ತೀವ್ರ ಬರಗಾಲದಿಂದ ಮೇವುಗಳು ದೊರೆಯದೆ ಮೃತಪಡುತ್ತಿರುವ ಗೋವುಗಳ ರಕ್ಷಣೆಗೆ ರಾಮಚಂದ್ರಾಪುರ ಮಠ ಮುಂದಾಗಿದೆ.
ಈ ಸಂಬಂಧ ಏಪ್ರಿಲ್ 2ರಿಂದ ಆರಂಭವಾಗುತ್ತಿರುವ ಯೋಗಪಟ್ಟಾಭಿಷೇಕ ದಿನದಿಂದ ಮೇವು ಪೂರೈಕೆ ಕಾರ್ಯವನ್ನು ಆರಂಭಿಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳು ಹಾಗೂ ಕೊಳ್ಳೆಗಾಲದಲ್ಲಿರುವ ಗೋವುಗಳಿಗೆ 24 ಲೋಡ್ ಮೇವುಗಳ ಪೂರೈಕೆ ನಡೆಯಲಿದೆ.
ದಕ್ಷಿಣ ಕನ್ನಡ, ಶಿವಮೊಗ್ಗ, ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ರಾಮಚಂದ್ರಾಪುರ ಮಠದ ಭಕ್ತರು ತಮ್ಮ ಮನೆಯ ತೋಟದ ಅಡಿಕೆ ಹಾಳೆಗಳನ್ನು ಪುಡಿ ಮಾಡಿ ಆಹಾರ ಒದಗಿಸುವ ವ್ಯವಸ್ಥೆ ಮಠದಿಂದ ನಡೆಯಲಿದೆ.
ಈ ಕುರಿತು ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಘವೇಶ್ವರ ಶ್ರೀಗಳು, ಆಲಂಬಾಡಿ, ಬರಗೂರು ದೇಶಿಗಳ ನಾಶವಾಗುತ್ತಿವೆ. ಗೋವುಗಳ ಮೃತಪಡಲು ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಮಲೆಮಹದೇಶ್ವರ ಬೆಟ್ಟಕ್ಕೆ ಬೇಲಿ ಹಾಕಲಾಗಿದೆ. ಇದರಿಂದ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿರುವ ಗೋವುಗಳಿಗೆ ಮೇವುಗಳ ಕೊರತೆಯಿಂದ ಸಾಕಷ್ಟು ರಾಸುಗಳು ಸಾವನ್ನಪ್ಪುತ್ತಿವೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗೋವುಗಳ ರಕ್ಷಣೆಗಾಗಿ ಗೋವು-ಮೇವು ಅಭಿಯಾನ ಏಪ್ರಿಲ್ 2ರಿಂದ ಆಂರಭಿಸುತ್ತಿರುವ ರಾಮಚಂದ್ರಾಪುರ ಮಠ ಮೂರು ತಿಂಗಳು ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳ ಹಾಗೂ ಕೊಳ್ಳೆಗಾಲದಲ್ಲಿರುವ ಹಳ್ಳಿಗಳಿಗೆ ಮೇವು ಒದಗಿಸುವ ಕಾರ್ಯ ಮಾಡಲಿದೆ.ಬಳಿಕ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೂ ಮೇವುಗಳ ವಿತರಣೆ ಮಾಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.