
ಜೈಪುರ[ಮೇ.31]: ಕಳೆದ ಅವಧಿಯಲ್ಲಿ ಸ್ಟಾರ್ ಸಚಿವರಾಗಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ ಈ ಬಾರಿ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ಅವರಿಗೆ ಮುಂದೆ ಯಾವ ಜವಾಬ್ದಾರಿ ನೀಡಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಪಡೆಯದ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೆಗಲಿಗೆ ಮಹತ್ತರ ಜವಾಬ್ದಾರಿ ಏರುವ ಸಾಧ್ಯತೆ ಇದೆ. ಹೌದು ಇವರನ್ನು ಬಿಜೆಪಿಯು ರಾಜಸ್ಥಾನದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಗಳಿವೆ.
ರಾಜಸ್ಥಾನದಲ್ಲಿ ಕಳೆದ ಬಾರಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಹೀನಾಯ ಸೋಲನುಭವಿಸಿತ್ತು. ಇದಾದ ಬಳಿಕ ಪಕ್ಷ ರಾಜ್ಯದಲ್ಲಿ ಬಲಿಷ್ಟ ನಾಯಕರ ಹುಡುಕಾಟದಲ್ಲಿತ್ತು. ಗಜೇಂದ್ರ ಸಿಂಗ್ ಶೆಖಾವತ್, ವಸುಂಧರಾ ರಾಜೆ ಬಳಿಕ ಹೆಚ್ಚು ಜನಪ್ರಿಯವಾಗಿರದ ಮದನ್ ಲಾಲ್ ಸೈನಿಯವರನ್ನು ರಾಜಸ್ಥಾನದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೀಗ ಇಲ್ಲಿ ಬಹುದೊಡ್ಡ ಬದಲಾವಣೆಯಾಗುವ ನಿರೀಕ್ಷೆಗಳಿವೆ. ಈ ಬಹುದೊಡ್ಡ ಜವಾಬ್ದಾರಿ ರಾಜ್ಯವರ್ಧನ್ ಬೆನ್ನೇರುವ ಸಾಧ್ಯತೆಗಳಿವೆ.
ಪ್ರಮಾಣ ವಚನದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.