ಮಮತಾ ಮುಂದೆ ಜೈ ಶ್ರೀರಾಮ್ ಎಂದ 7 ಜನರ ಬಂಧನ!

By Web DeskFirst Published May 31, 2019, 4:11 PM IST
Highlights

ಚುನಾವಣೆ ಮುಗಿದರೂ ಪ್ರಭು ಶ್ರೀರಾಮನ ಮೇಲೆ ಕಡಿಮೆಯಾಗದ ಕೋಪ| ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಂದೆ ಜೈ ಶ್ರೀರಾಮ್ ಅನ್ನಂಗಿಲ್ಲ| ಮಮತಾ ಧರಣಿ ನಡೆಸುತ್ತಿದ್ದ ಸ್ಥಳದಲ್ಲಿ ಜೈ ಶ್ರೀರಾಮ್ ಕೂಗಿದ 7 ಜನರ ಬಂಧನ| ಜೈ ಶ್ರೀರಾಮ್ ಘೋಷಣೆ ಕೂಗುವವರು ಹೊರಗಿನವರು ಎಂದ ಮಮತಾ| 

ಕೋಲ್ಕತ್ತಾ(ಮೇ.31): ಪ್ರಭು ಶ್ರೀರಾಮ ಚುನಾವಣೆಗಳಿಗಷ್ಟೇ ಸೀಮಿತ ಎಂದುಕೊಂಡರೆ, ಪ.ಬಂಗಾಳದಲ್ಲಿ ಮಾತ್ರ ಚುನಾವಣೆಗಳು ಮುಗಿದರೂ ಶ್ರೀರಾಮನ ಮೇಲಿನ ಕೋಪ ಕಡಿಮೆಯಾಗಿಲ್ಲ.

ಇಲ್ಲಿನ 24 ಪರಗಣ ಜಿಲ್ಲೆಯಲ್ಲಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡೆಸುತ್ತಿದ್ದ ಧರಣಿ ಸ್ಥಳದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಟಿಎಂಸಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಮಮತಾ ಬ್ಯಾನರ್ಜಿ ಒಂದು ದಿನದ ಸಾಂಕೇತಿಕ ಧರಣಿ ನಡೆಸುತ್ತಿದ್ದರು. ಈ ವೇಳೆ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ವೇಳೆ ಕೆಲವು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.

ಇದರಿಂದ ಕೆರಳಿದ ಮಮತಾ ಬ್ಯಾನರ್ಜಿ ತಮ್ಮ ಕಾರಿನಿಂದ ಕೆಳಗಿಳಿದು, ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದರು. ಅಲ್ಲದೇ ಹೊರ ರಾಜ್ಯದಿಂದ ಬಂದವರು ರಾಜ್ಯದಲ್ಲಿ ಶಾಂತಿಗೆ ಭಂಗ ತರುವ ಯತ್ನ ನಡೆಸಿದ್ದಾರೆ ಎಂದು ಮಮತಾ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದಾರೆ.

click me!