ಭಯೋತ್ಪಾದನೆ ನಿಗ್ರಹ ಕುರಿತು ಮಾತುಕತೆ ನಡೆಸಲು ಮುಂದಿನ ವಾರ ರಷ್ಯಾ, ಅಮೆರಿಕಾಗೆ ಭೇಟಿ ನೀಡಲಿರುವ ರಾಜನಾಥ್ ಸಿಂಗ್

By Internet DeskFirst Published Sep 11, 2016, 12:26 PM IST
Highlights

ನವದೆಹಲಿ (ಸೆ.11): ನೆರೆಯ ರಾಷ್ಟ್ರ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಆ ಕುರಿತು ಮಾತುಕತೆ ನಡೆಸಲು ಗೃಹ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ರಷ್ಯಾ ಮತ್ತು ಅಮೆರಿಕಾಗೆ ಭೇಟಿ ನೀಡಲಿದ್ದಾರೆ.

ರಾಜನಾಥ್ ಸಿಂಗ್ ಸೆಪ್ಟೆಂಬರ್ 18 ರಿಂದ ರಷ್ಯಾಗೆ ಪ್ರವಾಸ ಕೈಗೊಳ್ಳಲಿದ್ದು ಇಂಡೋ-ರಷ್ಯಾ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವ ಬಗ್ಗೆ ರಷ್ಯಾ ವಿದೇಶಾಂಗ ಸಚಿವ ವ್ಲಾದಿಮರ್ ಜೊತೆ ಚರ್ಚೆ ನಡೆಸಲಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಐಎಸ್’ಐಎಸ್ ಚಟುವಟಿಕೆ ಹೆಚ್ಚಾಗುತ್ತಿರುವ ಬಗ್ಗೆಯೂ ಚರ್ಚಿಸಲಿದ್ದಾರೆ.

ಸೆ.26 ಕ್ಕೆ ರಾಜನಾಥ್ ಸಿಂಗ್ ವಾಷಿಂಗ್ ಟನ್ ಗೆ ಪ್ರಯಾಣ ಬೆಳೆಸಿ ಭದ್ರತಾ ಮಾತುಕತೆ ನಡೆಸಲಿದ್ದಾರೆ.

click me!