
ಚೆನ್ನೈ (ಜ.01): ರಜನಿಕಾಂತ್ ನೂತನ ಪಕ್ಷದ ಲೋಗೋ ಆಯಪ್, ವೆಬ್ಸೈಟ್ ಆರಂಭವಾಗಿದೆ. ‘ಬಾಬಾ’ ಚಿತ್ರದ ಬೆರಳಿನ ಸಂಕೇತದ ಲೋಗೋ ಬಿಡುಗಡೆ ಮಾಡಿದ್ದಾರೆ. rajinimandram.org' ವೆಬ್ಸೈಟ್'ನ್ನು ಆರಂಭಿಸಿದ್ದಾರೆ.
ಪಕ್ಷ ಸೇರಲು ಇಚ್ಛಿಸುವರು ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಲು ಜನರಿಗೆ ರಜನೀಕಾಂತ್ ಆಹ್ವಾನ ನೀಡಿದ್ದಾರೆ.
"ಜನರ ಆಶಯದಂತೆ ತಮಿಳುನಾಡು ರಾಜಕಾರಣವನ್ನು ಸ್ವಚ್ಛಗೊಳಿಸಬೇಕಿದೆ. ನಾವೆಲ್ಲಾ ಸೇರಿ ಹೊಸ ಬದಲಾವಣೆ ತರೋಣ. ತಮಿಳುನಾಡು ಅಭಿವೃದ್ಧಿಗೆ ನೀವೆಲ್ಲರೂ ಕೈಜೋಡಿಸಿ. ನಮ್ಮ ವೆಬ್'ಸೈಟ್'ನಲ್ಲಿ ನಿಮ್ಮ ಹೆಸರು, ವಿಳಾಸ, ವೋಟರ್ ಐಡಿ ನಂಬರನ್ನು ನೊಂದಾಯಿಸಿ" ಎಂದು ತಮಿಳುನಾಡು ಜನರನ್ನು ಉದ್ದೇಶಿಸಿ ರಜನಿಕಾಂತ್ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.