
ಬೆಂಗಳೂರು (ಜ.01): ತ್ರಿವಳಿ ತಲಾಖ್ ಪ್ರಶ್ನಿಸಿ ಶಾಹಿರಾ ಭಾನು ಎಂಬ ಮಹಿಳೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ರು. ಪಾರ್ಲಿಮೆಂಟ್'ನಲ್ಲಿ ಇದಕ್ಕೆ ಅಗತ್ಯ ಇರುವ ಕಾನೂನನ್ನು ಸಂಸತ್'ನಲ್ಲಿ ಅಂಗೀಕರಿಸಲಾಗಿದೆ. ತ್ರಿವಳಿ ತಲಾಕ್'ಗೆ ಇತಿಶ್ರೀ ಹಾಡಲು ಕಾನೂನು ರೂಪಿಸಿದೆ. ಅದು ಇವತ್ತು ರಾಜ್ಯ ಸಭೆ ಮುಂದೆ ಬರಬೇಕಿದೆ ಆದರೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತ್ರಿವಳಿ ತಲಾಕ್ ಮಸೂದೆಗೆ ಒಪ್ಪಲ್ಲ. ಯಾವುದೇ ಕಾರಣಕ್ಕೂ ಮಸೂದೆ ಜಾರಿಗೆ ಬಿಡಲ್ಲ ಎಂದಿದ್ದಾರೆ ಎಂದು ಶಾಸಕ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳೋದು ಇಷ್ಟೇ. ತ್ರಿವಳಿ ತಲಾಖ್ ವಿಚಾರದಲ್ಲಿ ಯಾವುದೇ ವೋಟ್ ಬ್ಯಾಂಕ್ ರಾಜಕಾರಣ ಬೇಡ. ಈ ವಿಚಾರದಲ್ಲಿ ಮಹಿಳೆಯರ ಸಬಲೀಕರಣ ಆಗಬೇಕಿದೆ. ಸುಪ್ರೀಂಕೋರ್ಟ್ ಆದೇಶ ಹೊರ ಬಂದ ಬಳಿಕ 300 ಕ್ಕೂ ಹೆಚ್ಚು ತಲಾಕ್ ಆಗಿವೆ. ಮೆಸೇಜ್ ಮೂಲಕ ತಲಾಖ್ ನೀಡುತ್ತಾರೆ. ಹೀಗಾಗಿ ಈ ಮಸೂದೆ ಅಂಗೀಕಾರ ಮಾಡುವುದಕ್ಕೆ ಕಾಂಗ್ರೆಸ್ ಬೆಂಬಲ ನೀಡಬೇಕು. ಧರ್ಮದ ಆಧಾರದ ಮೇಲೆ ಇದನ್ನ ನೋಡಬೇಡಿ. ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಮಾಡಿಕೊಡಬೇಕು. ಸಿಎಂ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ರಾಜ್ಯದ ಮುಸ್ಲಿಂ ಬಾಂಧವರು ಎದುರು ನೋಡುತ್ತಿದ್ದಾರೆ, ಅವರು ಉತ್ತರಿಸ ಬೇಕು ಎಂದು ಶಾಸಕ ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.