ಮನೆ ಬಿಟ್ಟು ಓಡಿ ಹೋಗುವ ಜೋಡಿಗೆ ಸಿಗುತ್ತೆ ಆಶ್ರಯ ಮನೆ!

Published : Jan 21, 2019, 09:39 AM IST
ಮನೆ ಬಿಟ್ಟು ಓಡಿ ಹೋಗುವ ಜೋಡಿಗೆ ಸಿಗುತ್ತೆ ಆಶ್ರಯ ಮನೆ!

ಸಾರಾಂಶ

ಪೋಷಕರ ಆಶಯಕ್ಕೆ ವಿರುದ್ಧವಾಗಿ ಮನೆಬಿಟ್ಟು ಓಡಿ ಹೋಗಿ ಮದುವೆ ಆಗುವ ಜೋಡಿಗಳ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.

ಬಿಕಾನೇರ್‌[ಜ.21]: ತಮ್ಮ ಪೋಷಕರ ಆಶಯಕ್ಕೆ ವಿರುದ್ಧವಾಗಿ ಮನೆಬಿಟ್ಟು ಓಡಿ ಹೋಗಿ ಮದುವೆ ಆಗುವ ಜೋಡಿಗಳ ರಕ್ಷಣೆಗೆ ಆಶ್ರಯಗತಾಣ ತೆರೆಯಲು ರಾಜಸ್ಥಾನ ಪೊಲೀಸರು ಮುಂದಾಗಿದ್ದಾರೆ. ಅಲ್ಲದೇ ಈ ಜೋಡಿಗಳಿಗೆ ತಕ್ಷಣವೇ ನೆರವಾಗಲು ಸಹಾಯವಾಣಿಯೊಂದು ಆರಂಭವಾಗಲಿದೆ. ಒಂದು ವೇಳೆ ಪ್ರೇಮಿಗಳು ತಮಗೆ ಯಾರಿಂದಾದರೂ ಅಪಾಯವಿದೆ ಎಂದು ತಿಳಿದುಬಂದಲ್ಲಿ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.

ಜೀವ ಭಯದಿಂದ ಮನೆ ಬಿಟ್ಟು ಓಡಿ ಹೋಗುವ ನವ ವಿವಾಹಿತ ಜೋಡಿಗಳಿಗೆ ರಕ್ಷಣೆ ನೀಡುವಂತೆ ರಾಜಸ್ಥಾನ ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ವಿಸ್ತೃತ ಯೋಜನೆ ರೂಪಿಸಲಾಗಿದೆ. ನವ ಜೋಡಿಗಳಿಗೆ ನೆರವಾಗಲು ನೋಡಲ್‌ ಅಧಿಕಾರಿಯಾಗಿ ಹಿರಿಯ ಪೊಲೀಸ್‌ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಾ ನಿರ್ದೇಶಕ ಜಗ್ನಾ ಸಿಂಗ್‌ ಶ್ರೀನಿವಾಸ್‌ ರಾವ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು