ಬಹಿರ್ದೆಸೆ ಮಾಡುತ್ತಿದ್ದ ಮಹಿಳೆ ಪೋಟೋ ತೆಗೆಯುವುದನ್ನು ತಡೆಯಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ!

Published : Jun 16, 2017, 10:21 PM ISTUpdated : Apr 11, 2018, 01:06 PM IST
ಬಹಿರ್ದೆಸೆ ಮಾಡುತ್ತಿದ್ದ ಮಹಿಳೆ ಪೋಟೋ ತೆಗೆಯುವುದನ್ನು ತಡೆಯಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ!

ಸಾರಾಂಶ

ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆಯರ ಫೋಟೋವನ್ನು ತೆಗೆಯಲು ಯತ್ನಿಸಿದ ಅಧಿಕಾರಿಗಳನ್ನು ತಡೆಯಲು ಹೋದ ವ್ಯಕ್ತಿಯನ್ನೇ ಅಧಿಕಾರಿಗಳು ಥಳಿಸಿ ಹತ್ಯೆಗೈದಿದ್ದಾರೆ. 

ರಾಜಸ್ಥಾನ(ಜೂ.16): ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆಯರ ಫೋಟೋವನ್ನು ತೆಗೆಯಲು ಯತ್ನಿಸಿದ ಅಧಿಕಾರಿಗಳನ್ನು ತಡೆಯಲು ಹೋದ ವ್ಯಕ್ತಿಯನ್ನೇ ಅಧಿಕಾರಿಗಳು ಥಳಿಸಿ ಹತ್ಯೆಗೈದಿದ್ದಾರೆ. 

ಇಲ್ಲಿನ ಬಾಗ್ವಾಸ ಕಚಿ ಬಾಸ್ತಿ ಎನ್ನುವ ಪ್ರದೇಶದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಜಾಫರ್ ಖಾನ್ ಎನ್ನುವವರು ಮೃತಪಟ್ಟ ದುರ್ದೈವಿ. ಮಹಿಳೆಯೊಬ್ಬಳು ಬಹಿರ್ದೆಸೆ ಮಾಡುತ್ತಿರುವಾಗ ನಗರ ಪಾಲಿಕೆ ಅಧಿಕಾರಿಗಳು ಫೋಟೋ ತೆಗೆಯುತ್ತಿದ್ದರು. ಇಂತಹ ನಾಚಿಕೆಗೇಡಿನ ವರ್ತನೆಯನ್ನು ತಡೆಯಲು ಮುಂದಾಗಿದ್ದೇ ಜಾಫರ್ ಪ್ರಾಣಕ್ಕೆ ಕಂಟಕವಾಯಿತು. ಸ್ವಚ್ಚ ಭಾರತದ ಹೆಸರಿನಲ್ಲಿ ಅಧಿಕಾರಿಗಳು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆ ವ್ಯಕ್ತಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಅಧಿಕಾರಿಗಳು ಜಾಫರ್'ನನ್ನು ಚೆನ್ನಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಜಾಫರ್'ನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಜಾಫರ್ ಸಹೋದರ ನೂರ್ ಮಹಮ್ಮದ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ
ಬೈಕ್ ರೈಡಿಂಗ್‌ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್