ಮಾಹಿತಿ ಕೇಳಿದವರಿಗೆ, ಬಳಸಿದ ಕಾಂಡೋಮ್‌ ಕಳುಹಿಸಿದ RTI ಅಧಿಕಾರಿ!

By Web DeskFirst Published Jan 16, 2019, 3:55 PM IST
Highlights

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ ಇಬ್ಬರು ನಾಗರಿಕರಿಗೆ, RTI ಅಧಿಕಾರಿಗಳು ಬಳಸಿದ ಕಾಂಡೋಮ್ ಕಳುಹಿಸಿ ಕೊಟ್ಟ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಜೈಪುರ[ಜ.16]: ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಕೇಳಿದ ವಿಕಾಸ್ ಚೌಧರಿ ಹಾಗೂ ಮನೋಹರ್ ಲಾಲ್ ಎಂಬವರಿಗೆ ಆರ್ ಟಿ ಐ ಅಧಿಕಾರಿಗಳು ನೀಡಿದ ಉತ್ತರ ಬೆಚ್ಚಿ ಬೀಳಿಸುವಂತಿದೆ. ರಾಜಸ್ಥಾನದ ಹನುಮಾನ್ ಘಡ್ ಜಿಲ್ಲೆಯ ಇಬ್ಬರು ನಿವಾಸಿಗಳಿಗೆ ಆರ್ ಟಿಐ ಅಡಿ ಕೇಳಿದ ಮಾಹಿತಿಗೆ ಬಳಕೆ ಮಾಡಿದ ಹಳೆಯ ಎರಡು ಕಾಂಡೋಮ್ ಗಳನ್ನು ದಿನ ಪತ್ರಿಕೆಯಲ್ಲಿ ಪ್ಯಾಕ್ ಮಾಡಿ ನೀಡಲಾಗಿದೆ. 

ಹಿಂದೂಸ್ಥಾನ್ ಟೈಮ್ಸ್ ಪ್ರಕಟಿಸಿರುವ ವರದಿಯನ್ವಯ ವಿಕಾಸ್ ಚೌಧರಿ ಹಾಗೂ ಮನೋಹರ್ ಲಾಲ್ ಇಬ್ಬರೂ ಎಪ್ರಿಲ್ 16 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ, 2001ರಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುವಂತೆ ತಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಇಬ್ಬರಿಗೂ ಗ್ರಾಮ ಪಂಚಾಯಿತಿಯಿಂದ ಅಂಚೆ ಪತ್ರ ಬಂದಿದೆ. ತಾವು ಸಲ್ಲಿಸಿದ್ದ ಅರ್ಜಿಗೆ ಉತ್ತರ ಬಂದಿದೆ ಎಂದು ಅಂಚೆ ಲಕೋಟೆ ತೆರೆದಾಗ ನ್ಯೂಸ್ ಪೇಪರ್ ನಲ್ಲಿ ಸುತ್ತಿಟ್ಟಿರುವ ಹಳೆಯ ಹಾಗೂ ಬಳಸಿದ ಕಾಂಡೋಮ್‌ಗಳು ಸಿಕ್ಕಿವೆ.

ಗುಡ್‌ಬೈ 2018: ಹೆಚ್ಚು ಮಾರಾಟವಾದ ಕಾಂಡೋಮ್‌!

ಇದನ್ನು ನೋಡಿ ಹೌಹಾರಿದ ವಿಕಾಸ್ ಹಾಗೂ ಮನೋಹರ್ ಎರಡನೇ ಪತ್ರವನ್ನು ತೆರೆಯುವುದಕ್ಕೂ ಮೊದಲು ವಿಭಾಗೀಯ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ವಾಸ್ತವತೆಯನ್ನು ತಿಳಿಸಿದ್ದಾರೆ. ಅಲ್ಲದೇ ಈ ಅಂಚೆ ಲಕೋಟೆ ತೆರೆಯುವುದಕ್ಕೂ ಮೊದಲು ನೀವು ಉಪಸ್ಥಿತರಿರಬೇಕೆಂದು ಕೇಳಿಕೊಂಡಿದ್ದಾರೆ. ಆದರೆ ಅಧಿಕಾರಿ ಮಾತ್ರ ನಿರಾಕರಿಸಿದ್ದಾರೆ. ಬೇರೆ ದಾರಿ ಇಲ್ಲದ ವಿಕಾಸ್ ಹಾಗೂ ಮನೋಹರ್ ಗ್ರಾಮದ ಕೆಲ ಹಿರಿಯರ ಸಮ್ಮುಖದಲ್ಲಿ ಪತ್ರವನ್ನು ತೆರೆದಿದ್ದಾರೆ. ನಿರೀಕ್ಷೆಯಂತೆ ಎರಡನೇ ಲಕೋಟೆಯಲ್ಲೂ ಬಳಸಿದ ಕಾಂಡೋಮ್‌ಗಳೇ ಪತ್ತೆಯಾಗಿವೆ. ಆದರೆ ಎರಡನೇ ಪತ್ರವನ್ನು ತೆರೆಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. 

ಸೆಕ್ಸ್ ವೇಳೆ ಕಾಂಡೋಮ್ ಕಳಚಿದವನಿಗೆ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ ನವನೀತ್ ಕುಮಾರ್ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಚೇರಿಯಲ್ಲಿದ್ದ ಯಾರೋ ಕಿಡಗೇಡಿಗಳು ಹೀಗೆ ಮಾಡಿರಬಹುದು. ನಿಜಕ್ಕೂ ಇದು ಅಕ್ಷಮ್ಯ ತಪ್ಪು. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

click me!