
ಬೆಂಗಳೂರು (ಏ. 08): ಗೋ ಕಳ್ಳರ ಬಂಧನ ಆಗ್ರಹಿಸಿ ಅಮರಣಾಂತ ಉಪವಾಸ ಕೈಗೊಂಡ ರಾಜಾರಾಂ ಭಟ್ ಅಸ್ವಸ್ಥರಾಗಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳದಲ್ಲಿ ಕಳೆದ ಏಳು ದಿನಗಳಿಂದ ರಾಜಾರಾಂ ಭಟ್ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್, ಜಿಲ್ಲಾಡಳಿತ ಮನವೊಲಿಸಲು ಯತ್ನಿಸಿದರೂ ರಾಜಾರಾಂ ಭಟ್ ಉಪವಾಸ ಕೈ ಬಿಡಲು ಒಪ್ಪಿರಲಿಲ್ಲ. ನಿನ್ನೆ ಆರ್’ಎಸ್’ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮನವೊಲಿಕೆ ಪ್ರಯತ್ನವೂ ವಿಫಲವಾಗಿದೆ. ಇಂದು ರಾಜಾರಾಂ ಭಟ್ ದೇಹಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜಾರಾಂ ಭಟ್ ಅಧ್ಯಕ್ಷತೆಯ ಅಮೃತಧಾರ ಗೋಶಾಲೆಯಿಂದ ಗೋ ಕಳವು ಮಾಡಿರುವ ನೈಜ ಆರೋಪಿಗಳ ಬಂಧನ ಆಗುವವರೆಗೆ ಆಮರಣಾಂತ ಉಪವಾಸ ಪ್ರತಿಭಟನೆ ಕೈಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.