ಕೇರಳ ರೈಲು ಮಾರ್ಗಕ್ಕೆ ಅನುಮತಿ ಬೇಡ : ಸಿಎಂಗೆ ಸಂಸದ ಪ್ರತಾಪ್ ಸಿಂಹ ಮನವಿ

Published : Jul 10, 2018, 03:57 PM IST
ಕೇರಳ ರೈಲು ಮಾರ್ಗಕ್ಕೆ ಅನುಮತಿ ಬೇಡ : ಸಿಎಂಗೆ ಸಂಸದ ಪ್ರತಾಪ್ ಸಿಂಹ ಮನವಿ

ಸಾರಾಂಶ

ಕೊಡಗಿನಿಂದ 65 ಕಿ.ಮೀ ಹಾದು ಹೋಗುವ ಕೇರಳ ಸರ್ಕಾರದ ಉದ್ದೇಶಿತ ತಲಚೇರಿ - ಮೈಸೂರು ರೈಲು ಮಾರ್ಗ ಉದ್ದೇಶಿತ ಯೋಜನೆಯಿಂದ ಅರಣ್ಯ ನಾಶ ಹಾಗೂ ಮಳೆಯ ಪ್ರಮಾಣ ಕುಂಠಿತ

ಬೆಂಗಳೂರು[ಜು.10]: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇಂದು ವಿಧಾನಸೌಧದಲ್ಲಿ ಭೇಟಿಯಾಗಿ ಕೇರಳ ಸರ್ಕಾರದ ಉದ್ದೇಶಿತ ತಲಚೇರಿ - ಮೈಸೂರು ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು ಮನವಿಪತ್ರ ಸಲ್ಲಿಸಿದರು.

ಕೇರಳ ಸರ್ಕಾರದ ಈ ಯೋಜನೆಯು ದಕ್ಷಿಣ ಕೊಡಗು ಮಾರ್ಗವಾಗಿ 65 ಕಿ.ಮೀ ಹಾದಹೋಗುವುದರಿಂದ ಕೊಡಗಿನಲ್ಲಿ 2 ಲಕ್ಷ ಮರಗಳು ನಾಶವಾಗಲಿದೆ. ಇದರಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿ ಕಾವೇರಿ ನದಿ ನೀರಿನ ಹರಿಯುವಿಕೆಯ ಪ್ರಮಾಣ ಕೂಡ ಕಡಿಮೆಯಾಗಲಿದೆ. ಕೊಡಗಿನ ಹಲವು ಸಂಘಸಂಸ್ಥೆಗಳು, ನಾಗರಿಕರು ಈ ಯೋಜನೆಯನ್ನು ವಿರೋಧಿಸಿದ್ದಾರೆ. ಅರಣ್ಯ ನಾಶ ಹಾಗೂ ಪರಿಸರ ಹಾನಿ ದೃಷ್ಟಿಯಿಂದ ಯೋಜನೆಗೆ ಅನುಮತಿ ನೀಡಬಾರದೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಐಪಿಎಲ್ ಜೊತೆ 3 ವರ್ಷಗಳ ಅವಧಿಗೆ ₹270 ಕೋಟಿಗೆ ಜೆಮಿನಿ ಪ್ರಾಯೋಜಕತ್ವದ ಒಪ್ಪಂದ
Karnataka News Live: ಬಿಎಂಟಿಸಿ ಕಂಡಕ್ಟರ್‌ಗಳಿಂದ UPI ಹಗರಣ! ವೈಯಕ್ತಿಕ ಖಾತೆಯ ಕ್ಯೂಆರ್‌ ಕೋಡ್‌ ಬಳಸಿ ಮೋಸ