
ಸಿಡ್ನಿ(ಜು.10): 8 ವರ್ಷಗಳ ಸತತ ಪ್ರಯತ್ನದಿಂದ ವಿಶ್ವದ ದೈತ್ಯ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಸಾಗರ ತಜ್ಞರು ಯಶಸ್ವಿಯಾಗಿದ್ದಾರೆ. ಸುಮಾರು 600 ಕೆಜಿ ತೂಕದ ಈ ದೈತ್ಯ ಮೊಸಳೆ 2010 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.
ಸುಮಾರು 15.4 ಅಡಿ ಎತ್ತರ ಇರುವ ಈ ಮೊಸಳೆಗೆ 60 ವರ್ಷ ಆಯಸ್ಸು ಎನ್ನಲಾಗಿದ್ದು, ಇದನ್ನು ಹಿಡಿಯಲು ಸತತ 8 ವರ್ಷಗಳ ಕಾಲ ಸತತ ಪ್ರಯತ್ನ ನಡೆಸಲಾಗಿತ್ತು. ಸದ್ಯ ಈ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದ್ದು, ಈ ಮೊಸಳೆಯ ಅಧ್ಯಯನ ನಡೆಸಲಾಗುವುದು ಎಂದು ಸಾಗರತಜ್ಞ ಟ್ರೇಸಿ ಡಲ್ಡಿಗ್ ಹೇಳಿದ್ದಾರೆ.
ಆಸ್ಟ್ರೆಲೀಯಾದಲ್ಲಿ ಮೊಸಳೆಯನ್ನು ವನ್ಯಮೃಗ ಸುರಕ್ಷಿತ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಕಳೆದ ವರ್ಷ ನದಿಯಲ್ಲಿ ಮಹಿಳೆಯನ್ನು ಮೊಸಳೆಯೊಂದು ಕೊಂದ ಬಳಿಕ, ಮೊಸಳೆಗಳ ಸಂಖ್ಯೆ ಕಡಿಮೆ ಮಾಡಲು ಜನರು ಆಗ್ರಹಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.