
ವಡೋದರಾ: ಪದ್ಮಾವತ್ ಚಿತ್ರ ವೀಕ್ಷಿಸುತ್ತೇನೆಂದ ರಜಪೂತ ಯುವಕನಿಗೆ ಥಳಿಸಿದ ಆರೋಪದಲ್ಲಿ ಗುಜರಾತ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ರಜಪೂತ ಸಮುದಾಯಕ್ಕೆ ಸೇರಿದ ಉಪೇಂದ್ರ ಸಿಂಗ್ ಜಾಧವ್ ಪದ್ಮಾವತ್ ಚಿತ್ರ ವೀಕ್ಷಿಸಲು ಯೋಜನೆ ಹಾಕಿಕೊಂಡಿದ್ದು, ಸಮುದಾಯದ ಇತರರಿಗೆ ರೊಚ್ಚಿಗೆಬ್ಬಿಸಿದೆ.
ಕಳೆದ ಜ. 24ರಂದು ಹೋಟೆಲ್ ಒಂದರಲ್ಲಿ ಕುಳಿತು, ಗೆಳಯನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ, ಗುಜರಾತ್’ನಲ್ಲಿ ಪದ್ಮಾವತ್ ಬಿಡುಗಡೆಯಾಗುವ ಸಾಧ್ಯತೆಯಿಲ್ಲ, ಆದ್ದರಿಂದ ಚಿತ್ರ ವೀಕ್ಷಿಸಲು ತಾನು ಮುಂಬೈಗೆ ಹೋಗುವುದಾಗಿ ಹೇಳಿದ್ದಾನೆ.
ಅದನ್ನು ಕೇಳಿಸಿಕೊಂಡ ಆರೋಪಿಗಳು ಆತನನ್ನು ಥಳಿಸಿ, ಕ್ಷಮೆಯಾಚಿಸುವಂತೆ ಒತ್ತಾಯಪಡಿಸಿದ್ದಾರೆ. ಈ ಎಲ್ಲಾವನ್ನು ಆರೋಪಿಗಳು ಮೊಬೈಲ್’ನಲ್ಲಿ ಚಿತ್ರೀಕರಿಸಿದ್ದಾರೆ. ಅದು ಬಳಿಕದ ದಿನಗಳಲ್ಲಿ ವೈರಲ್ ಕೂಡಾ ಆಗಿದೆ.
ಘಟನೆಯ ಬಳಿಕ ಉಪೇಂದ್ರ ಸಿಂಗ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ, ಹಾಗೂ ಪದ್ಮಾವತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆಯೆಂದು ಆರೋಪಿಸಿ ರಜಪೂತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.