ಎಂಇಎಸ್ ಕರಾಳ ದಿನಕ್ಕೆ ರಾಜ್ ಠಾಕ್ರೆ ಗರಂ: ಬೆಳಗಾವಿ ಎಂದಿಗೂ ಕರ್ನಾಟಕದ್ದೆ

Published : Nov 03, 2016, 02:44 PM ISTUpdated : Apr 11, 2018, 12:48 PM IST
ಎಂಇಎಸ್ ಕರಾಳ ದಿನಕ್ಕೆ ರಾಜ್ ಠಾಕ್ರೆ ಗರಂ: ಬೆಳಗಾವಿ ಎಂದಿಗೂ ಕರ್ನಾಟಕದ್ದೆ

ಸಾರಾಂಶ

ಬೆಳಗಾವಿಯಲ್ಲಿ ಏನಾದರೂ ಸಮಸ್ಯೆ ಮಾಡಿ ಎಂಇಎಸ್ ನಾಯಕರು  ಬಳಿಕ ನನ್ನ ಹತ್ರ ಬರ್ತಾರೆ, ಸಿಎಂ ಹತ್ರ ಹೋಗ್ತಾರೆ, ಇನ್ಯಾರ ಹತ್ರನೋ ಹೋಗ್ತಾರೆ, ಮತ್ತೆ  ಅಲ್ಲಿ ಹೋಗಿ ರಂಪಾಟ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬೈ(ಅ.3): ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್ ಕರಾಳ ದಿನ ಆಚರಣೆ ಆಚರಿಸಿದ್ದಕ್ಕೆ ಎಂಎನ್'ಎಸ್ ಮುಖಂಡ ರಾಜ್ ಠಾಕ್ರೆ ಗುಡುಗಿದ್ದಾರೆ.

ಮುಂಬೈನಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ, ಬೆಳಗಾವಿಯಲ್ಲಿ ಏನಾದರೂ ಸಮಸ್ಯೆ ಮಾಡಿ ಎಂಇಎಸ್ ನಾಯಕರು  ಬಳಿಕ ನನ್ನ ಹತ್ರ ಬರ್ತಾರೆ, ಸಿಎಂ ಹತ್ರ ಹೋಗ್ತಾರೆ, ಇನ್ಯಾರ ಹತ್ರನೋ ಹೋಗ್ತಾರೆ, ಮತ್ತೆ  ಅಲ್ಲಿ ಹೋಗಿ ರಂಪಾಟ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಹಾರಾಷ್ಟ್ರದ ಸಿಎಂ ಆಗಿದ್ದಿದ್ದರೆ ,ಮಹಾರಾಷ್ಟ್ರದ ವಿರುದ್ದ ಯಾವುದಾದರೂ ಪಾಲಿಕೆ ಕರಾಳ ದಿನ ಅಚರಿಸಿದ್ದಿದ್ದರೆ ಅವರನ್ನೆಲ್ಲ ನಾನು ಸದೆ ಬಡಿಯುತ್ತಿದ್ದೆ. ಯಾವುದೇ ವಿವಾದ ಇತ್ಯರ್ಥ ಆಗದೇ ಇರುವಾಗ ಕರ್ನಾಟಕದ ದಿನವನ್ನು ಕರಾಳ ದಿನ ಅಂತ ಆಚರಿಸುತ್ತೀರಿ, ಇದ್ಯಾವ ಪದ್ದತಿ ಎಂದು ಗರಂ ಆದರು.

ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದು ತೀರ್ಮಾನ ಬರೋವರೆಗೂ ಸುಮ್ಮನೆ ಇರಿ. ಅದರ ಬದಲಿಗೆ ಮಹಾರಾಷ್ಟ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸುವಂತೆ ಒತ್ತಡ ಹಾಕಿ. ಕರ್ನಾಟಕದ ಜ್ಞಾನ ಪೀಠ ಪ್ರಶಸ್ತಿ ವಿಜೇತರೊಬ್ಬರು ಬೆಳಗಾವಿ, ಕಾರವಾರ ಬಗ್ಗೆ ಮಾತನಾಡಿದರೆ ಅವರ ಮುಖಕ್ಕೆ ಮಸಿ ಬಳಿಯಿರಿ ಅಂತ ಈ ಎಂಇಎಸ್'ನ ಕೆಲವರು ಹೇಳುತ್ತಾರೆ. ಉತ್ತರ ಪ್ರದೇಶ, ಬಿಹಾರದ ಜನ ಬಂದು ಮಹಾರಾಷ್ಟ್ರದ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಮುಖಕ್ಕೆ ಮಸಿ ಬಳಿದರೆ ಅವರನ್ನು  ನಾವೇನು ಮಾಡಬಹುದು ಹೇಳಿ?. ಕಳೆದ 65 ವರ್ಷಗಳಿಂದ ಎಂಇಎಸ್ ನವರು ಬೆಳಗಾವಿಯಲ್ಲಿ ಜನರನ್ನು ಬೆಳಗಾವಿ ಕರ್ನಾಟಕದಿಂದ ಬಿಡುಗಡೆ ಹೊಂದಲಿದೆ ಎಂದು  ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಇದು ಯಾವತ್ತೂ ಸಾಧ್ಯವಿಲ್ಲದ ಮಾತು. ಇವರಿಗೆ ಈ ವಿಷಯವನ್ನಿಟ್ಟುಕೊಂಡು ಕೇವಲ ಆಟ ಆಡುವುದಷ್ಟೇ ಉದ್ದೇಶ. ಅಲ್ಲಿಯ ಕೆಲವು ಜನರಿಗೂ ಇದೇ ಬೇಕಾಗಿದೆ. ಇದು ನನ್ನ ಸ್ಪಷ್ಟ ನಿಲುವು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ