
ಬೆಂಗಳೂರು(ಅ.19): ರಾಜ್ಯದಲ್ಲಿ ಸುರಿಯುತ್ತಿರೋ ಎಡೆಬಿಡದೆ ಮಳೆ ಮಾಡಿರುವ ಅನಾಹುತ ಒಂದೆರೆಡಲ್ಲ. ಹೈನುಗಾರಿಕೆ ಉದ್ಯಮಕ್ಕೂ ಭಾರೀ ಹೊಡೆತ ನೀಡಿದೆ. ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿರೋ ವರುಣ ಇನ್ನೊಂದೆಡೆ ಹಾಲು ಒಕ್ಕೂಟದ ಮಾಲೀಕರಿಗೆ ಕಣ್ಣೀರು ತರಿಸಿದೆ. ಅರೇ ಮಳೆಗೂ, ಹಾಲು ಒಕ್ಕೂಟಕ್ಕೂ ಅದೇನು ಸಂಬಂಧ ಅಂತೀರಾ ಇಲ್ಲಿದೆ ನೋಡಿ ವಿವರ.
ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ ಚಾಮರಾಜನಗರ ಹಾಲು ಒಕ್ಕೂಟಕ್ಕೆ ಭಾರೀ ನಷ್ಟು ಉಂಟು ಮಾಡಿದ್ದಾನೆ. ಸಮೃದ್ಧ ಮಳೆಯಿಂದ ದನಕರುಗಳಿಗೆ ಒಳ್ಳೆ ಮೇವು ಸಿಕ್ಕಿದೆ. ಇದರಿಂದ ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದುಲಕ್ಷಾಂತರ ಲೀಟರ್ ಒಕ್ಕೂಟಕ್ಕೆ ಬರುತ್ತಿದೆ. ಇದು ಹಾಲಿನ ಬೇಡಿಕೆಯ್ನು ತಗ್ಗಿಸಿದೆ. ಪರಿಣಾಮ ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ 45 ಕೋಟಿ ನಷ್ಟವಾಗಿದೆ.
ಬೇಡಿಕೆ ಕಡಿಮೆ ಹಿನ್ನೆಲೆ ರೈತರಿಗೆ ನೀಡುತ್ತಿದ್ದ ಹಾಲಿನ ದರವನ್ನೂ 2 ರುಪಾಯಿ 50ಪೈಸೆ ಇಳಿಕೆ ಮಾಡಲಾಗಿದೆ. ಅದರಿಂದಲೂ ಆದಾಯ ಬರುತ್ತಿಲ್ಲ. ಹೊರ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಹಾಲಿನ ಬೇಡಿಕೆ ಕಡಿಮೆ ಆಗಿರೋದು ನಷ್ಟಕ್ಕೆ ಕಾರಣವಾಗಿದೆ.
ಒಟ್ಟಾರೆ ಮಳೆ ಹೆಚ್ಚಾಗಿ ಹಸುಗಳಿಗೆ ಮೇವು ಸಿಕ್ಕಿರುವುದು ರೈತರಿಗೆ ಖುಷಿ ತಂದಿದೆ. ಆದರೆ ಒಕ್ಕೂಟಕ್ಕೆ ಹೊರೆಯಾಗಿ ಪರಿಣಮಿಸಿರೋದು ಮಾತ್ರ ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.