
ಬೆಂಗಳೂರು(ಅ.19): ಬೆಳಕಿನ ಹಬ್ಬ ದೀಪಾವಳಿ, ಬಾಳು ಬೆಳಗಬೇಕಾದ ಹಬ್ಬ ಈ ಬಾರಿಯೂ ಕೆಲವರ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಬೆಂಗಳೂರಿನಲ್ಲಿ ಮೊದಲ ದಿನವೇ 3, ಬಳ್ಳಾರಿಯಲ್ಲಿ 1 ಪಟಾಕಿ ಅವಘಡ ನಡೆದಿವೆ.
ಕಬ್ಬನ್ ಪೇಟೆಯಲ್ಲಿ 10 ವರ್ಷದ ಬಾಲಕ ಭುವೇಶ್ ಪಟಾಕಿ ಹಚ್ಚಲು ಹೋಗಿ ಗಾಯಗೊಂಡು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಹಲಸೂರು ಎಂ.ವಿ.ಗಾರ್ಡನ್ ನಿವಾಸಿ 9 ವರ್ಷದ ವಿಲಿಯಂ ರಾಕೆಟ್ ಹಾರಿಸುವ ವೇಳೆ ಗಾಯಗೊಂಡು ನಾರಾಯಣ ನೇತ್ರಾಲಯ ಸೇರಿದ್ದಾನೆ.
ಆಡುಗೋಡಿಯ ಎಲ್.ಆರ್ ನಗರದ ಬೀದಿಲಿ ಯಾರೋ ಹಚ್ಚಿದ ರಾಕೆಟ್ ಕಣ್ಣಿಗೆ ತಾಕೀ , ಶಾರುಕ್ ಕಣ್ಣು ಕಳೆದುಕೊಂಡಿದ್ದಾನೆ. ಶಾರುಕ್ ಸ್ಥಿತಿ ಗಂಭಿರವಾಗಿದ್ದು,ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಬಳ್ಳಾರಿಯಲ್ಲೂ ಕೂಡ ಓರ್ವ ಬಾಲಕನ ಮುಖಕ್ಕೆ ಗಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.