
ಬೆಂಗಳೂರು(ಸೆ.21): ಉದ್ಯಾನನಗರಿಯಲ್ಲಿ ಸುರಿದ ಭಾರೀ ಮಳೆಗೆ, ಬೆಂಗಳೂರಿಗರು ಅಕ್ಷರಶಃ ಪರದಾಡುವಂತಾಗಿದೆ. ಅದ್ರಲ್ಲೂ ಕಾರು ಮಾಲೀಕರಂತು ದೇವ್ರೆ ಸಾಕಪ್ಪ ಈ ಕಾರಿನ ಸಹವಾಸ. ಕಾರಿನ ರಿಪೇರಿಗೆ ದುಡ್ಡು ಸುರಿಯಲು ನಮ್ಮಿಂದಾಗಲ್ಲ ಅನ್ನೋ ಸ್ಥಿತಿ ತಲುಪಿದ್ದಾರೆ. ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಶಾಂತಿನಗರ ಸೇರಿದಂತೆ ಹಲವೆಡೆ ಸಾವಿರಾರು ಕಾರುಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಕೆಟ್ಟು ಗ್ಯಾರೇಜ್ ಸೇರಿರುವ ಕಾರುಗಳ ರಿಪೇರಿಗೆ ಮಾಲೀಕರು ಕಂಗಾಲಾಗಿದ್ದಾರೆ.
ಸಾಕಪ್ಪ ಕಾರಿನ ಸಹವಾಸ
ಕಾರುಗಳ ರಿಪೇರಿಗೆ ಸರ್ವೀಸ್ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ ಕೇಳಲಾಗುತ್ತಿದೆ. ಒಂದು ಕಾರಿನ ರಿಪೇರಿಗೆ 5 ರಿಂದ10 ದಿನಗಳು ಹಿಡಿಯುತ್ತಿದ್ದು. 40 ಸಾವಿರದಿಂದ 2 ಲಕ್ಷದವರೆಗೂ ಖರ್ಚಾಗುತ್ತಿದೆ. ಕೇಳಿದ ಟೈಂಗೆ ಕಾರು ಬೇಕಂದ್ರೆ ಅವ್ರು ಕೇಳಿದಷ್ಟು ಹಣ ನೀಡಲೇಬೇಕು. ಈವರೆಗೆ ಟೊಯೋಟಾ, ಮಾರುತಿ, ಹೊಂಡೈ ಸೇರಿದಂತೆ ಇನ್ನಿತ್ತರ ಕಂಪೆನಿಯ ಸುಮಾರು 260 ಕಾರುಗಳು ಮಳೆಯಿಂದಾಗಿ ಹಾನಿಗೀಡಾಗಿವೆ. ಇದರಲ್ಲಿ ಸುಮಾರು 180 ಕಾರುಗಳನ್ನು ರಿಪೇರಿ ಮಾಡಲಾಗಿದ್ದು, 120 ವಾಹನಗಳ ರಿಪೇರಿ ಇನ್ನೂ ಬಾಕಿ ಇದೆ.
ಮಳೆಯಿಂದ ಜಲಾವೃತಗೊಂಡ ಕಾರನ್ನ ಅನೇಕರು ಚಾಲನೆ ಮಾಡಿ, ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾರಿನ ಎಂಜಿನ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಕಾರುಗಳು ಕೆಟ್ಟು ಹೋಗುತ್ತಿವೆ. ಈ ರೀತಿ ಕಾರನ್ನು ಚಾಲನೆ ಮಾಡಿರುವುದರಿಂದ ಅಂತಹ ವಾಹನಗಳಿಗೆ ವಿಮೆ ಕೂಡಾ ಸಿಗೋದಿಲ್ಲ. ಇದ್ರಿಂದ ಕಾರು ರಿಪೇರಿಗೆ ಹಣ ಹೊಂದಿಸಲು ಮಾಲೀಕರು ಪರದಾಡುತ್ತಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.