ಎಸ್.ಎಂ. ಕೃಷ್ಣ ಅಳಿಯ ಸಿದ್ಧಾರ್ಥ್ ಹೆಗಡೆಗೆ ಐಟಿ ಶಾಕ್: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಮುಖಂಡರ ಸಂಬಂಧಿಕರ ಸರದಿ

By Suvarna Web DeskFirst Published Sep 21, 2017, 11:15 AM IST
Highlights

ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ  ಅಳಿಯನ ಮೇಲೆ ಐಟಿ ದಾಳಿಯಾಗಿದೆ. ಕಾಫಿ ಡೇ ಒಡೆಯ ಸಿದ್ಧಾರ್ಥ್'ಗೆ ಸೇರಿದ ಹಲವು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಈ ದಾಳಿಗೆ ಡಿ. ಕೆ ಶಿವಕುಮಾರ್ ಲಿಂಕ್ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಬೆಂಗಳೂರು(ಸೆ.21): ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ  ಅಳಿಯನ ಮೇಲೆ ಐಟಿ ದಾಳಿಯಾಗಿದೆ. ಕಾಫಿ ಡೇ ಒಡೆಯ ಸಿದ್ಧಾರ್ಥ್'ಗೆ ಸೇರಿದ ಹಲವು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಈ ದಾಳಿಗೆ ಡಿ. ಕೆ ಶಿವಕುಮಾರ್ ಲಿಂಕ್ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಡಿಕೆಶಿ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸಿಕ್ಕ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ಇದೇ ಮಾಹಿತಿ ಆಧರಿಸಿ  ದಾಳಿ ನಡೆದಿದೆ ಎನ್ನಲಾಗಿದೆ.

ಈ ಹಿಂದೆ ಮಾಜಿ ಕೇಂದ್ರ ಸಚಿವ ಚಿದಂಬರಂ ಪುತ್ರನ ಮೇಲೂ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಕಾರ್ತಿಕ್ ಚಿದಂಬರಂ ಕಚೇರಿಯಲ್ಲೂ ಸಿದ್ದಾರ್ಥ್'ಗೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿದ್ದವು ಎಂದು ಸುವರ್ಣ ನ್ಯೂಸ್'ಗೆ ನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.  

ಕಳೆದ ಕೆಲದಿನಗಳಿಂದ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಭಾರೀ ಸುದ್ದಿ ಮಾಡಿತ್ತು. ಇದೀಗ  ದಾಳಿಯ ಬೆರನ್ನಲ್ಲೇ ಬಿಜೆಪಿ ನಾಯಕನ ಪುತ್ರನ ಮೇಲೂ ಐಟಿ ದಾಳಿ ನಡೆದಿರುವುದು ಭಾರೀ ಕುತೂಹಲ ಸೃಷ್ಟಿಸಿದೆ.

 

click me!