
ನವದೆಹಲಿ(ಸೆ.21): ಅರೇ ಇದೇನಪ್ಪಾ ಅಂತ ಶಾಕ್ ಆಯ್ತಾ. ಹೌದು ಈ ಸುದ್ದಿ ನೋಡಿದ್ರೆ ಎಂಥವರೂ ಕೂಡ ಶಾಕ್ ಆಗ್ಲೇಬೇಕು. ನಿಮಗೆ ರಿಲ್ಯಾಕ್ಸ್ ತರಬಹುದು ಅಂತ ನೀವೇನಾದರೂ ಹೆಡ್ ಮಸಾಜ್ ಮಾಡಿಸಿಕೊಳ್ಳಕ್ಕೆ ಹೋಗಿದ್ರೆ, ನಿಮ್ಮ ಜೀವಕ್ಕೆ ಆಪತ್ತು ಬಂದುಬಿಡುತ್ತೆ. ಯಾಕಂದ್ರೆ ಇದೇ ತರ ಹೆಡ್ ಮಸಾಜ್ ಮಾಡಿಸಿಕೊಳ್ಳಕ್ಕೆ ಹೋಗಿದ್ದವನು ಆಸ್ಪತ್ರೆ ಬೆಡ್ ಸೇರಿದ್ದಾನೆ.
ದೆಹಲಿಯಲ್ಲಿ 54 ವರ್ಷದ ಅಜಯ್ ಕುಮಾರ್ ಎಂಬಾತ ಹೆಡ್ ಮಸಾಜ್ ಮಾಡಿಸಿಕೊಳ್ಳಲು ಹೋಗಿದ್ದಾನೆ. ಸಲೂನ್ ಸಿಬ್ಬಂದಿ ಲಟಿಕೆ ತೆಗೆದು, ಕುತ್ತಿಗೆಯಿಂದ ಟಕ್ ಟಕ್ ಎಂದು ಶಬ್ದ ಬರುವವರೆಗೂ ಮಸಾಜ್ ಮಾಡಿದ್ದಾನೆ. ಮಸಾಜ್ ಸರಿಯಾಗಿದೆ ಎಂದು ಖುಷಿಪಟ್ಟ ಅಜಯ್'ಗೆ ಶಾಕ್ ಕಾದಿತ್ತು. ಆತ ಎದ್ದು ನಿಂತಾಗ ಆತನ ಕುತ್ತಿಯ ನರಗಳೇ ಶಕ್ತಿ ಕಳೆದುಕೊಂಡಿದ್ದವು.
ಮಸಾಜ್ ವೇಳೆ ತೆಗೆದ ಲಟಿಕೆಯಿಂದ ಬರುತ್ತಂತೆ ಪಾರ್ಶ್ವವಾಯು!
ಹೆಡ್ ಮಸಾಜ್ ಪದೇ ಪದೇ ಮಾಡಿಸುವುದರಿಂದ ಹಾಗೂ ನೆಟಿಕೆ ತೆಗೆಸಿಕೊಳ್ಳುವುದರಿಂದ ಉಸಿರಾಟದಲ್ಲಿ ಏರುಪೇರಾಗಿ ರಕ್ತದೊತ್ತಡ ಹೆಚ್ಚಳವಾಗುವುದರ ಜೊತೆಗೆ ಪಾರ್ಶ್ವವಾಯು ಪೀಡಿತರಾಗುವ ಸಂಭವವೂ ಇದೆ. ಮೆದುಳಿನ ಹಿಂಭಾಗಕ್ಕೆ ರಕ್ತ ಪೂರೈಕೆ ಮಾಡುವ ಪ್ರಮುಖ ನಾಡಿಗೆ ಹಾನಿಯಾಗುವ ಸಂಭವವಿದೆ. ಅಷ್ಟೇ ಅಲ್ಲದೆ ಮಸಾಜ್ ವೇಳೆ ಸಲೂನ್ ಸಿಬ್ಬಂದಿ ಸ್ಪಲ್ಪ ಯಾಮಾರಿದ್ದರೂ ಅಂಗವೈಕಲ್ಯ ಅಥವಾ ಸಾವು ಸಂಭವಿಸುವ ಸಾಧ್ಯತೆ ಇವೆ.
ಒಟ್ಟಿನಲ್ಲಿ ಯಾವದಕ್ಕೂ ಸಲೂನ್ ಶಾಪ್ನಲ್ಲಿ ಹೆಡ್ ಮಸಾಜ್ ಮಾಡಿಸಿಕೊಳ್ಳುವ ಗ್ರಾಹಕರು ಇನ್ನು ಮುಂದೆ ಸ್ಪಲ್ಪ ಯೋಚಿಸುವುದು ಒಳ್ಳೆಯದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.