ರಾಮಾಯಣದ ಸ್ಥಳಗಳಿಗೆ ರೈಲ್ವೆಯಿಂದ ಪ್ಯಾಕೇಜ್ ಟೂರ್

By Web DeskFirst Published Aug 25, 2018, 11:36 AM IST
Highlights

ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ತೆರಬೇಕೆಂದುಕೊಂಡಿರುವವರಿಗೆ ರೈಲ್ವೆ ಇಲಾಖೆ ಶುಔ ಸುದ್ದಿಯೊಂದನ್ನು ನೀಡಿದೆ.  ಪ್ರವಾಸಿಗರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ‘ಶ್ರೀರಾಮಾಯಣ ಯಾತ್ರಾ  ಎಕ್ಸ್‌ಪ್ರೆಸ್’ ಎಂಬ ಪ್ರವಾಸಿ ರೈಲನ್ನು ನವೆಂಬರ್ 14 ರಿಂದ ಆರಂಭಿಸು ವುದಾಗಿ ಪ್ರಕಟಿಸಿದೆ. 

ನವದೆಹಲಿ: ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ‘ಶ್ರೀರಾಮಾಯಣ ಯಾತ್ರಾ  ಎಕ್ಸ್‌ಪ್ರೆಸ್’ ಎಂಬ ಪ್ರವಾಸಿ ರೈಲನ್ನು ನ. 14 ರಿಂದ ಆರಂಭಿಸು ವುದಾಗಿ ಪ್ರಕಟಿಸಿದೆ. ಈ ರೈಲು ಬಳ್ಳಾರಿ ಜಿಲ್ಲೆಯ ಹೊಸ ಪೇಟೆಗೂ ಆಗಮಿಸುತ್ತದೆ. ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಮೂಲಕ 15 ದಿನಗಳ ಪ್ಯಾಕೇಜ್ ಪ್ರವಾಸವನ್ನು ರೈಲ್ವೆ ಇಲಾಖೆ ರೂಪಿಸಿದೆ. 

ಊಟ, ವಸತಿ, ಸಾರಿಗೆ ವೆಚ್ಚ ಎಲ್ಲವನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ. ತಮಿಳುನಾಡಿನ ಮದುರೈ, ದಿಂಡಿಗಲ್, ಕರೂರು, ಈರೋಡ್, ಸೇಲಂ, ಜೋಲಾರ್‌ಪೇಟೆ, ಕಾಟ್ಪಾಡಿ, ಚೆನ್ನೈ ಸೆಂಟ್ರಲ್, ರೇಣಿಗುಂಟ ದಲ್ಲಿ ಪ್ರವಾಸಿಗರು ಈ ರೈಲನ್ನು ಏರ ಬಹುದು. ಈ ರೈಲು ನಿಲುಗಡೆ ಆಗುವ ಮೊದಲ ಪ್ರವಾಸಿ ತಾಣ ಹಂಪಿ. ಅಲ್ಲಿಂದ ಕಿಷ್ಕಿಂಧೆಗೆ ಯಾತ್ರಿಗಳನ್ನು ಕರೆದೊಯ್ಯಲಾಗುತ್ತದೆ. 

ನಂತರ ಮಹಾರಾಷ್ಟ್ರ, ಬಿಹಾರ, ನೇಪಾಳ, ಅಲಹಾ ಬಾದ್, ರಾಮೇಶ್ವರ್ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಲಿದೆ.800 ಮಂದಿ ಈ ರೈಲಿನಲ್ಲಿ ತೆರಳಬಹುದಾಗಿದೆ. ಮದುರೈ ನಿಂದ ಆರಂಭವಾಗುವ ಈ ರೈಲು ಯಾತ್ರೆ ರಾಮೇಶ್ವರಂನಲ್ಲಿ ಅಂತ್ಯಗೊಳ್ಳಲಿದೆ.

click me!