ತಿರುಪತಿಗೆ ತೆರಳುವ ಭಕ್ತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

Published : Jan 17, 2019, 03:31 PM ISTUpdated : Jan 17, 2019, 03:40 PM IST
ತಿರುಪತಿಗೆ ತೆರಳುವ ಭಕ್ತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಸಾರಾಂಶ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ವೆಂಕಟೇಶ್ವರನ ದರ್ಶನ ಮಾಡಲು ತೆರಳಿದ ಭಕ್ತರು ಅಲ್ಲಿ ಪಂಚತಾರ ಹೋಟೆಲ್ ಅನುಭವ ಪಡೆಯಬಹುದಾಗಿದೆ. 

ನವದೆಹಲಿ : ತಿರುಪತಿಗೆ ರೈಲು ಪ್ರಯಾಣ ಮಾಡುವವರಿಗೆ ಭಾರತೀಯ ರೈಲ್ವೆ ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದೆ. 

ತಿರುಪತಿ ಬಾಲಾಜಿ ದರ್ಶನಕ್ಕೆ ತೆರಳುವವರು ತಿರುಪತಿ ರೈಲು ನಿಲ್ದಾಣದಲ್ಲಿ 5 ಸ್ಟಾರ್ ಹೋಟೆಲ್ ಅನುಭವವನ್ನು ಪಡೆದುಕೊಳ್ಳಬಹುದು. ತಿರುಪತಿ ರೈಲ್ವೆ ನಿಲ್ದಾಣವನ್ನು  ಪಂಚತಾರ ಹೋಟೆಲ್ ನಂತೆ  ನಿರ್ಮಾಣ ಮಾಡಲಾಗಿದೆ. 

ಪಿರಿಯಡ್ಸ್ ನೋವಿಗೆ ಸ್ಪಂದಿಸಿದ ಸ್ನೇಹಿತ, ರೈಲ್ವೆ ಇಲಾಖೆಗೆ ಧನ್ಯವಾದ

ಪಂಚತಾರ ಹೋಟೆಲ್ ನಂತೆ ವ್ಯವಸ್ಥೆ ಇರುವ ತಿರುಪತಿ ರೈಲು ನಿಲ್ದಾಣದ ಫೊಟೊಗಳನ್ನು ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಇದಕ್ಕೆ ಅತಿಥಿ ಎಂದು ಹೆಸರು ಇಡಲಾಗಿದೆ. ಶೀಘ್ರವೇ ಇದರ ಉದ್ಘಾಟನೆಯಾಗಲಿದೆ ಎಂದೂ ಕೂಡ ತಿಳಿಸಿದ್ದಾರೆ.

 

ಇಲ್ಲಿ ಪ್ರಯಾಣಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಡ್ರಾಪ್ ಆಫರ್ ಏರಿಯಾ, ಮಲ್ಟಿಫ್ಲೆಕ್ಸ್, ಪ್ಲಾಜ, ವೈಟಿಂಗ್ ಏರಿಯಾ, ಭದ್ರತಾ ಪರಿಶೀಲನಾ ವ್ಯವಸ್ಥೆ, ಫುಡ್ ಕೋರ್ಟ್ ಸೌಲಭ್ಯ ಇಲ್ಲಿದೆ. 

ಬೆಳಗಾವಿ: 1,500 ಜನರ ಪ್ರಾಣ ಉಳಿಸಿದ ಇಬ್ಬರು ಮುಸ್ಲಿಂ ಯುವಕರು..!

ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ವೆಂಕಟೇಶ್ವರನ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.  ಈ ನಿಟ್ಟಿನಲ್ಲಿ ಸುಸಜ್ಜಿತವಾದ ನಿಲ್ದಾಣ ನಿರ್ಮಾಣ ಮಾಡಲಾಗಿದೆ.

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!