ಲೋಕಸಭೆಯೊಂದಿಗೆ ರಾಜ್ಯದಲ್ಲಿ ಚುನಾವಣೆ..? ಎಲೆಕ್ಷನ್ ಸಿಕ್ರೇಟ್ ಏನು?

By Web DeskFirst Published Jan 17, 2019, 2:19 PM IST
Highlights

ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ರಾಜ್ಯಪಾಲರು ರಾಜ್ಯ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಒಂದು ಪಕ್ಷ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳೂ ಕೂಡ ಶೀಘ್ರ ಚುನಾವಣೆ ಬಯಸುತ್ತಿವೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್  ಮಲಿಕ್ ಹೇಳಿದ್ದಾರೆ. 

ಜಮ್ಮು : ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳೂ ಕೂಡ ಶೀಘ್ರವೇ ಚುನಾವಣೆ ನಡೆಯಲಿ ಎಂದು ಬಯಸುತ್ತಿವೆ ಎಂದು ಗವರ್ನರ್ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. 

ಆದರೆ ಚುನಾವಣಾ ಆಯೋಗವು ಚುನಾವಣೆ ನಡೆಯುವ ಸಮಯವನ್ನು ನಿರ್ಧಾರ ಮಾಡಲಿದೆ ಎಂದಿದ್ದಾರೆ. 

ಪ್ರತೀ ಪಕ್ಷಗಳಿಂದಲೂ ಕೂಡ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಆದರೆ ಚುನಾವಣಾ ಸಮಯವನ್ನು ನಿರ್ಧಾರ ಮಾಡುವ ಅಧಿಕಾರ  ಚುನಾವಣಾ ಆಯೋಗಕ್ಕೆ ಮಾತ್ರವೇ ಇದೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್  ಹೇಳಿದ್ದಾರೆ.

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಲಾಗುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

ವಿವಿಧ ಪಕ್ಷಗಳಿಂದ ವಿವಿಧ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಕೆಲ ಪಕ್ಷಗಳು ಶೀಘ್ರ ಚುನಾವಣೆಯನ್ನು ಬಯಸಿದರೆ, ಕೆಲ ಪಕ್ಷಗಳು ತಡವಾಗಿ ಚುನಾವಣೆ ನಡೆಯಲಿ ಎಂದು ಬಯಸುತ್ತಿವೆ ಎಂದಿದ್ದಾರೆ. 

ಆದರೆ ಬಿಜೆಪಿ ಮಾತ್ರ ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ಕೂಡ ಚುನಾವಣೆ ನಡೆಯಲಿ ಎಂದು ಬಯಸುತ್ತಿದೆ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. 

click me!