ಬಿಜೆಪಿಗೆ ಆಘಾತ : ಪಕ್ಷ ತೊರೆದ ಮಾಜಿ ಸಿಎಂ

By Web DeskFirst Published Jan 17, 2019, 1:01 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಆಘಾತ ಎದುರಾಗಿದೆ. ಮಾಜಿ ಸಿಎಂ ಓರ್ವರು ಪಕ್ಷ ತೊರೆದು ಶಾಕ್ ನೀಡಿದ್ದಾರೆ. 

ಇಟಾನಗರ: ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ವಿವಿಧ ಕಸರತ್ತು ನಡೆಸುತ್ತಿವೆ. ಇದೇ ಬೆನ್ನಲ್ಲೇ ಬಿಜೆಪಿ ಅರುಣಾಚಲದಲ್ಲಿ ಆಘಾತ ಒಂದು ಎದುರಾಗಿದೆ. 

ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಗೆಗೊಂಗ್ ಅಪಾಂಗ್ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದಾರೆ.  

ಈಗಿನ ಬಿಜೆಪಿ ರಾಜಧರ್ಮ ಪಾಲಿಸದೇ ಅಧಿಕಾರದ ಹಿಂದೆ ಬಿದ್ದಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಸಂಸದನ ಕಾಂಗ್ರೆಸ್ ಒಲವು : ಚುನಾವಣಾ ಬೆನ್ನಲ್ಲೇ ನೀಡ್ತಾರಾ ಶಾಕ್..?

ಇತ್ತ ಕರ್ನಾಟಕದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ‘ಆಪರೇಷನ್ ಕಮಲ’ ಆರಂಭಿಸಿದೆ ಎನ್ನಲಾಗುತ್ತಿರುವ ಬಿಜೆಪಿ, ಕಳೆದ ತಿಂಗಳಷ್ಟೇ ಅಧಿಕಾರ ಕ್ಕೇರಿದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಅದೇ ತಂತ್ರಗಾರಿಕೆಯನ್ನು ಮಾಡುತ್ತಿದೆಯೇ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿವೆ. 

ಕೈಗೆ ಶಾಕ್: ಕರ್ನಾಟಕದ ಬೆನ್ನಲ್ಲೇ ಮತ್ತೊಂದು ರಾಜ್ಯದಲ್ಲಿ 'ಆಪರೇಷನ್ ಕಮಲ'?

ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಆಕ್ರೋಶಗೊಂಡಿರುವ ಬಿಜೆಪಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಕುದುರೆ ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದೆ ಆರೋಪ  ಕೇಳಿ ಬಂದಿದೆ. ಈ ಮೂಲಕ ಬಿಜೆಪಿ ಮತ್ತೆ ಅಧಿಕಾರ ಪಡೆಯುವ ಯತ್ನದಲ್ಲಿ ಸಾಗುತ್ತಿದೆ ಎಂದು ಹೇಳಲಾಗಿದೆ. 

click me!