
ನವದೆಹಲಿ: ನಷ್ಟದಲ್ಲಿದ್ದ ಭಾರತೀಯ ರೈಲ್ವೆ ಪುನರುತ್ಥಾನಕ್ಕಾಗಿ ನಾನಾ ಮಾರ್ಗಗಳ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿರುವ ರೈಲ್ವೆ ಇಲಾಖೆ, ದೇಶದ ಪ್ರಮುಖ 600 ರೈಲು ನಿಲ್ದಾಣಗಳನ್ನು ಖಾಸಗಿ ಯವರಿಗೆ 99 ವರ್ಷ ಕಾಲ ಲೀಸ್ ಆಧಾರದಲ್ಲಿ ನೀಡುವ ಪ್ರಸ್ತಾಪ ಸಿದ್ಧ ಪಡಿಸಿದೆ.
ಆದರೆ ಈ ಎಲ್ಲ ರೈಲು ನಿಲ್ದಾಣಗಳನ್ನು ಕೇವಲ ಏಕಾಂಗಿಯಾಗಿ ಅಭಿವೃದ್ಧಿ ಗೊಳಿಸದೇ ಖಾಸಗಿಯವರನ್ನೂ ಅದರಲ್ಲಿ ಒಳಗೊಳ್ಳುವಂತೆ ಮಾಡಲು ಇಲಾಖೆ ನಿರ್ಧಾರ ಮಾಡಿದೆ. ಈ ಪ್ರಕಾರ ರೈಲ್ವೆ ಇಲಾಖೆಯು ಆಧುನೀಕರಣದ ವೆಚ್ಚದಲ್ಲಿನ ಕೇವಲ ಶೇ.25ರಿಂದ 50 ಭಾಗ ಮಾತ್ರ ಭರಿಸಲಿದ್ದು, ಉಳಿದುದನ್ನು ಖಾಸಗಿ ಕಂಪನಿಗಳು ಭರಿಸಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.