ಬೇಡಿಕೆ ಇಲ್ಲದಾಗ ಇಳಿಯಲಿದೆ ರೈಲು ಟಿಕೆಟ್ ದರ

By Suvarna Web DeskFirst Published Dec 17, 2017, 1:32 PM IST
Highlights

ರೈಲ್ವೆ ಟಿಕೆಟ್’ಗಳಿಗೆ ಬೇಡಿಕೆ ಇಲ್ಲದಿರುವಾಗ ಅಥವಾ ರೈಲು ಸೀಟುಗಳ ಭರ್ತಿಯಾಗದಂಥ ಸಂದರ್ಭದಲ್ಲಿ ವಿಮಾನ ಟಿಕೆಟ್ ರೀತಿಯಲ್ಲಿ ರೈಲುಗಳ ಟಿಕೆಟ್’ಗಳು ಸಹ ಶೀಘ್ರದಲ್ಲೇ ಕಡಿಮೆ ಬೆಲೆಗೆ ಲಭ್ಯವಾಗುವ ಸಾಧ್ಯತೆ ಇದೆ.

ನವದೆಹಲಿ (ಡಿ.17): ರೈಲ್ವೆ ಟಿಕೆಟ್’ಗಳಿಗೆ ಬೇಡಿಕೆ ಇಲ್ಲದಿರುವಾಗ ಅಥವಾ ರೈಲು ಸೀಟುಗಳ ಭರ್ತಿಯಾಗದಂಥ ಸಂದರ್ಭದಲ್ಲಿ ವಿಮಾನ ಟಿಕೆಟ್ ರೀತಿಯಲ್ಲಿ ರೈಲುಗಳ ಟಿಕೆಟ್’ಗಳು ಸಹ ಶೀಘ್ರದಲ್ಲೇ ಕಡಿಮೆ ಬೆಲೆಗೆ ಲಭ್ಯವಾಗುವ ಸಾಧ್ಯತೆ ಇದೆ.

ರೈಲ್ವೆ ಸಚಿವ ಪೀಯೂಷ್ ಗೋಯಲ್ ಸಮಾರಂಭವೊಂದರಲ್ಲಿ ಈ ವಿಷಯ ತಿಳಿಸಿದ್ದು, ರೈಲ್ವೆ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸುಳಿವು ನೀಡಿದ್ದಾರೆ. ಕಳೆದ ವರ್ಷ ರೈಲ್ವೆ ಇಲಾಖೆ ಜಾರಿಗೆ ತಂದ ಫ್ಲೆಕ್ಸಿ ದರ ನಿಗದಿ ಮಾಡಿದ್ದರೂ, ಅದು ಏಕಮುಖವಾಗಿತ್ತು.

ಅಂದರೆ ಸೀಸನ್ ಸಮಯದಲ್ಲಿ ಹೆಚ್ಚು ದರ ಪಡೆಯಲಾಗುತ್ತಿತ್ತು. ಇದರಿಂದ ಇಲಾಖೆಗೆ 540 ಕೋಟಿ ರು. ಹೆಚ್ಚುವರಿ ಆದಾಯ ಬಂದಿತ್ತು. ಆದರೆ ಏಕಮುಖದ ಫ್ಲೆಕ್ಸಿ ದರದ ಬಗ್ಗೆ ಪ್ರಯಾಣಿಕರಲ್ಲಿ ಅಸಮಾಧಾನವಿದೆ. ಹೀಗಾಗಿ ರೈಲುಗಳ ಸೀಟು ಭರ್ತಿಯಾಗದ ಸಂದರ್ಭದಲ್ಲಿ ಟಿಕೆಟ್’ಗಳನ್ನು ರಿಯಾಯತಿ ದರದಲ್ಲಿ ನೀಡುವ ಯೋಚನೆ ಈಗ ನಡೆದಿದೆ ಎಂದು ಹೇಳಿದರು.

click me!