ಎಚ್1ಬಿ ವೀಸಾ ಹೊಂದಿರುವ ನೌಕರರ ಸಂಗಾತಿ ಕೆಲಸಕ್ಕೆ ಕತ್ತರಿ ?

By Suvarna Web DeskFirst Published Dec 17, 2017, 1:18 PM IST
Highlights

ಅಮೆರಿಕದಲ್ಲಿ ಎಚ್1ಬಿ ವೀಸಾ ಹೊಂದಿರುವ ನೌಕರರ ಸಂಗಾತಿ (ಗಂಡ ಅಥವಾ ಹೆಂಡತಿ)ಗಳಿಗೆ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ಒಬಾಮಾ ಆಡಳಿತಾವಧಿಯ ನಿಯಮವನ್ನು ಹಿಂಪಡೆಯಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ ನಡೆಸಿದೆ.

ವಾಷಿಂಗ್ಟನ್(ಡಿ.17): ಅಮೆರಿಕದಲ್ಲಿ ಎಚ್1ಬಿ ವೀಸಾ ಹೊಂದಿರುವ ನೌಕರರ ಸಂಗಾತಿ (ಗಂಡ ಅಥವಾ ಹೆಂಡತಿ)ಗಳಿಗೆ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ಒಬಾಮಾ ಆಡಳಿತಾವಧಿಯ ನಿಯಮವನ್ನು ಹಿಂಪಡೆಯಲು ಡೊನಾಲ್ಡ್ ಟ್ರಂಪ್ ಆಡಳಿತ ಚಿಂತನೆ ನಡೆಸಿದೆ. ಈ ನಿಯಮ ಹಿಂಪಡೆದಲ್ಲಿ, ಹೆಚ್ಚಿನ ಸಂಖ್ಯೆಯ ಎಚ್1ಬಿ ವೀಸಾ ಹೊಂದಿರುವ ಭಾರತೀಯರ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.

ಎಚ್1ಬಿ ವೀಸಾ ಹೊಂದಿದ್ದು, ಗ್ರೀನ್ ಕಾರ್ಡ್’ಗಾಗಿ ಕಾಯುತ್ತಿರುವ ನೌಕರರ ಸಂಗಾತಿಗಳು ಎಚ್-4 ಅವಲಂಬಿತ ವೀಸಾದಲ್ಲಿ ಉದ್ಯೋಗ ಹೊಂದುವ ಅವಕಾಶವನ್ನು 2015ರಲ್ಲಿ ಒಬಾಮಾ ಆಡಳಿತ ನೀಡಿತ್ತು. ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಟ್ರಂಪ್ ಇಂಥದ್ದೊಂದು ಹೊಸ ನೀತಿ ಜಾರಿಗೆ ತರಲು ನಿರ್ಧರಿಸಿದೆ ಎನ್ನಲಾಗಿದೆ.

click me!