ರೈಲ್ವೆ ಇಲಾಖೆ ನೌಕರರಿಗೆ ಇದು ಸಿಹಿ ಸುದ್ದಿ

First Published Jun 21, 2018, 8:51 AM IST
Highlights

ರೈಲ್ವೆಯ ಗ್ರೂಪ್‌ ಸಿ ಅಥವಾ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 62,000 ನೌಕರರು ಶೀಘ್ರದಲ್ಲೇ ಗ್ರೂಪ್‌ ಬಿ ನೌಕರರ ಸೌಲಭ್ಯ ಹಾಗೂ ವೇತನವನ್ನು ಪಡೆಯಲಿದ್ದಾರೆ. ರೈಲ್ವೆ ಇಲಾಖೆ ಗ್ರೂಪ್‌ ಸಿ ನೌಕರರಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ.
 

ನವದೆಹಲಿ: ರೈಲ್ವೆಯ ಗ್ರೂಪ್‌ ಸಿ ಅಥವಾ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 62,000 ನೌಕರರು ಶೀಘ್ರದಲ್ಲೇ ಗ್ರೂಪ್‌ ಬಿ ನೌಕರರ ಸೌಲಭ್ಯ ಹಾಗೂ ವೇತನವನ್ನು ಪಡೆಯಲಿದ್ದಾರೆ. ರೈಲ್ವೆ ಇಲಾಖೆ ಗ್ರೂಪ್‌ ಸಿ ನೌಕರರಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ.

ಪದೋನ್ನತಿ ಪಡೆದ ನೌಕರರು 200 ರು. ಹೆಚ್ಚಿನ ವೇತನ ಪಡೆಯಲಿದ್ದಾರೆ. ಅಲ್ಲದೇ ಒಂದು ವೇಳೆ ಅವರು ಗೆಜೆಟೆಡ್‌ ಅಧಿಕಾರಿಗಳ ಸ್ಥಾನಮಾನವನ್ನು ಪಡೆದುಕೊಂಡಿದ್ದರೆ, ಕಾರು, ಮನೆ, ಜವಾನ ಹಾಗೂ ಓರ್ವ ಸರ್ಕಾರಿ ಅಧಿಕಾರಿಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ. ರೈಲ್ವೆಯ ಈ ನಡೆಯಿಂದ 62,000 ಉದ್ಯೋಗಿಗಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಈ ಸಂಬಂಧ ಜೂ.12ರಂದು ಆದೇಶ ಹೊರಡಿಸಲಾಗಿದ್ದು, ಗ್ರೂಪ್‌ ಸಿ ನೌಕರರ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ವೇತನ ಆಯೋಗದ ಕಾರ್ಯನಿರ್ವಾಹಕ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ಪರಿಶೀಲಿಸಲಿದೆ.

click me!