ರಾಯಚೂರಿನಲ್ಲಿ ಲೇಡಿ ಪಿಎಸ್'ಐ ಜೊತೆ ಬಿಜೆಪಿ ಶಾಸಕನ ಲವ್ವಿಡವ್ವಿ

Published : Jun 07, 2017, 09:50 AM ISTUpdated : Apr 11, 2018, 12:55 PM IST
ರಾಯಚೂರಿನಲ್ಲಿ ಲೇಡಿ ಪಿಎಸ್'ಐ ಜೊತೆ ಬಿಜೆಪಿ ಶಾಸಕನ ಲವ್ವಿಡವ್ವಿ

ಸಾರಾಂಶ

ಸೌಮ್ಯ ನೀಡಿರುವ ದೂರಿನ ಪ್ರಕಾರ, 4 ವರ್ಷದಿಂದ ಪಿಎಸ್'ಐ ಬೇಬಿ ವಾಲೇಕರ್ ಜೊತೆ ಅವರ ಪತಿ ತಿಪ್ಪರಾಜು ಸಂಬಂಧವಿದೆ. ಆಕೆ ಎಲ್ಲೆಲ್ಲಿ ವರ್ಗಾವಣೆಯಾಗುತ್ತಾಳೋ ಅಲ್ಲೆಲ್ಲಾ ತಮ್ಮ ಪತಿ ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದಾರೆ ಎಂದು ಸೌಮ್ಯ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು(ಜೂನ್ 07): ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪರಾಜು ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದೆ. ಲೇಡಿ ಪಿಎಸ್'ಐ ಬೇಬಿ ವಾಲೇಕರ್ ಎಂಬುವರ ಜೊತೆ ತಮ್ಮ ಪತಿ 2ನೇ ಮದುವೆಯಾಗಿದ್ದಾರೆ ಎಂದು ಶಾಸಕ ತಿಪ್ಪರಾಜು ಪತ್ನಿ ಸೌಮ್ಯ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆಂಬ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ.

"ಮಹಿಳಾ ಪಿಎಸ್'ಐ ಬೇಬಿ ವಾಲೇಕರ್ ನನ್ನ ಜೀವನ ಹಾಳು ಮಾಡಿದ್ದಾಳೆ. ನನ್ನ ಗಂಡನನ್ನು ನನಗೆ ಕೊಡಿಸದಿದ್ದರೆ ನಾನು ಮತ್ತು ನನ್ನ ಮಕ್ಕಳು ಪ್ರಾಣ ಬಿಡುತ್ತೇವೆ," ಎಂದು ಸೌಮ್ಯ ತಿಪ್ಪರಾಜು ತಮ್ಮ ದೂರಿನಲ್ಲಿ ತಿಳಿಸಿದ್ದಾರೆನ್ನಲಾಗಿದೆ.

ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವ ಸೌಮ್ಯ ಅವರು 3 ತಿಂಗಳ ಹಿಂದೆಯೇ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದೇ ವೇಳೆ, ದೂರು ನೀಡಿದ್ದಕ್ಕೆ ತನ್ನ ಗಂಡನಿಂದ ಜೀವ ಬೆದರಿಕೆ ಬಂದಿದೆ ಎಂದು ಸೌಮ್ಯ ಆರೋಪಿಸಿದ್ದಾರೆ.

ಸೌಮ್ಯ ನೀಡಿರುವ ದೂರಿನ ಪ್ರಕಾರ, 4 ವರ್ಷದಿಂದ ಪಿಎಸ್'ಐ ಬೇಬಿ ವಾಲೇಕರ್ ಜೊತೆ ಅವರ ಪತಿ ತಿಪ್ಪರಾಜು ಸಂಬಂಧವಿದೆ. ಆಕೆ ಎಲ್ಲೆಲ್ಲಿ ವರ್ಗಾವಣೆಯಾಗುತ್ತಾಳೋ ಅಲ್ಲೆಲ್ಲಾ ತಮ್ಮ ಪತಿ ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದಾರೆ ಎಂದು ಸೌಮ್ಯ ಅಳಲು ತೋಡಿಕೊಂಡಿದ್ದಾರೆ.

16 ವರ್ಷದ ಹಿಂದೆ ಸೌಮ್ಯ ಮತ್ತು ತಿಪ್ಪರಾಜು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ದೂರು ನೀಡಿಲ್ಲ: ಸೌಮ್ಯ
ಮಾಧ್ಯಮಗಳಲ್ಲಿ ತಿಪ್ಪರಾಜು ಅನೈತಿಕ ಸಂಬಂಧದ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅವರ ಪತ್ನಿ ಸೌಮ್ಯ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಸೌಮ್ಯ, ತಮ್ಮ ಪತಿ ತಿಪ್ಪರಾಜು ಶ್ರೀರಾಮಚಂದ್ರನಂಥವರು. ಯಾರೊಂದಿಗೂ ಅವರು ಅಕ್ರಮ ಸಂಬಂಧ ಹೊಂದಿಲ್ಲ. ನಾನು ಅವರೊಂದಿಗೆ ಸಂತೋಷದಿಂದ ಸಂಸಾರ ನಡೆಸುತ್ತಿದ್ದೇನೆ. ನಾನು ಯಾವ ಮಹಿಳಾ ಆಯೋಗಕ್ಕೂ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BDA: ಸುಪ್ರೀಂ ತೀರ್ಪಿನ ವಿರುದ್ಧವಾಗಿ ಬಡಾವಣೆ ಅನುಮೋದಿತ ನಕ್ಷೆಯನ್ನೇ ಬದಲಿಸಿದ ಬಿಡಿಎ
ಐಟಿ ಕಂಪನಿಗಳಿರೋ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ ಅನುದಾನ: ಸಚಿವ ಕೃಷ್ಣ ಬೈರೇಗೌಡ