
ನವದೆಹಲಿ (ಜ.11): ರಜೆ ಮುಗಿಸಿಕೊಂಡು ವಾಪಸ್ಸಾಗಿರುವ ರಾಹುಲ್ ಗಾಂಧಿ ಮತ್ತೆ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಮೋದಿಯವರಿಗೆ ಪದ್ಮಾಸನ ಹಾಕುವುದಕ್ಕೆ ಸಾಧ್ಯವಾಗಿಲ್ಲವೆಂದು ತಮಾಷೆ ಮಾಡಿದ್ದಾರೆ.
ಯೋಗ ದಿನ ಪ್ರಧಾನಿ ಮೋದಿ ಯೋಗ ಮಾಡುವುದನ್ನು ನಾನು ನೋಡಿದ್ದೇನೆ. ಎಲ್ಲಾ ರೀತಿಯ ಆಸನಗಳನ್ನು ಹಾಕಿದರು ಆದರೆ ಪದ್ಮಾಸನ ಮಾತ್ರ ಹಾಕಿಲ್ಲ ಎಂದು ರಾಹುಲ್ ಗಾಂಧಿ ತಮಾಷೆಯಾಗಿ ಹೇಳಿದ್ದಾರೆ.
ನಾನು ಕೆಲವೊಂದು ಯೋಗಗಳನ್ನು ಮಾಡಿದೆ. ನನಗೆ ತುಂಬಾ ಚೆನ್ನಾಗಿ ಮಾಡುವುದಕ್ಕೆ ಬರುವುದಿಲ್ಲ. ನಿರಂತರವಾಗಿ ಯೋಗಾಭ್ಯಾಸ ಮಾಡಿದರೆ ಪದ್ಮಾಸನ ಹಾಕುವುದು ಸುಲಭವೆಂದು ನನ್ನ ಯೋಗಗುರು ಹೇಳಿದರು.
ನಾನು ಯಾವಾಗಲೂ ಯೋಗಾಭ್ಯಾಸ ಮಾಡುತ್ತೇನೆಂದು ಮೋದಿ ಹೇಳುತ್ತಾರೆ ಆದರೆ ಸರಳವಾದ ಪದ್ಮಾಸನವನ್ನು ಹಾಕುವುದಕ್ಕೆ ಬರುವುದಿಲ್ಲವೆಂದು ರಾಹುಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.