ರಫೆಲ್ ಆದೇಶ ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ಕೋರ್ಟ್ ಕ್ಷಮೆ ಕೋರಿದ ರಾಹುಲ್!

By Web DeskFirst Published Apr 22, 2019, 2:10 PM IST
Highlights

ರಫೆಲ್ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಉಲ್ಲೇಖ| ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಮೂಲಕ ಕ್ಷಮೆ ಕೋರಿದ ರಾಹುಲ್| ಪ್ರಚಾರದ ಕಾವಿನಲ್ಲಿ ಇಂತಹ ತಪ್ಪಾದ ಹೇಳಿಕೆ ನೀಡಿದ್ದಾಗಿ ರಾಹುಲ್ ಸ್ಪಷ್ಟನೆ| ಮಾಧ್ಯಮದ ಮುಂದೆ ರಾಹುಲ್ ನೀಡಿದ್ದ ಹೇಳಿಕೆಗೆ ಕೋರ್ಟ್ ಅಸಮಾಧಾನ|

ನವದೆಹಲಿ(ಏ.22): ರಫೆಲ್ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಉಚ್ಚರಿಸಿದ್ದಕ್ಕಾಗಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಚಾರದ ಕಾವಿನಲ್ಲಿ ಇಂತಹ ತಪ್ಪಾದ ಹೇಳಿಕೆ ನೀಡಿದ್ದಾಗಿ ಅಫಿಡವಿಟ್ ನಲ್ಲಿ ಉಲ್ಲೇಖಿಸಿರುವ ರಾಹುಲ್, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಿಸಿದ್ದಾರೆ.

Congress President Rahul Gandhi says "he regretted that he gave the statement" (on Rafale verdict), in his reply to the Supreme Court on contempt petition filed by Meenakshi Lekhi https://t.co/Hpjovr3srV

— ANI (@ANI)

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತಪ್ಪಾಗಿ ವಿವರಿಸಿದ್ದ ರಾಹುಲ್ ಅವರಿಗೆ ಕೋರ್ಟ್ ಏಪ್ರಿಲ್ 22 ರೊಳಗೆ ತಮ್ಮ ಮಾತಿಗೆ ತಕ್ಕ ವಿವರಣೆಯನ್ನು  ನೀಡಬೇಕೆಂದು ನಿರ್ದೇಶನ ನೀಡಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ರಫೆಲ್ ತೀರ್ಪಿನ ಕುರಿತು ರಾಹುಲ್ ಗಾಂಧಿ ಮಾಧ್ಯಮಗಳೆದುರು ನೀಡಿದ್ದ ಹೇಳಿಕೆ ತೀರ್ಪನ್ನು ತಪ್ಪಾಗಿ ಬಿಂಬಿಸಿದೆ ಎಂದು ಅಸಮಾಧಾನ ಹೊರಹಾಕಿದೆ.

ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ವಿವರಣೆ ಕೋರಿತ್ತು. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!
Last Updated Apr 22, 2019, 3:31 PM IST
click me!