ರಾಹುಲ್ ಗಾಂಧಿಗೆ ಎದುರಾಯ್ತು ಹೊಸ ಸಂಕಷ್ಟ

By Web DeskFirst Published Aug 9, 2018, 10:35 AM IST
Highlights

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾವು 2010 ರಿಂದ ಯಂಗ್ ಇಂಡಿಯಾ ಕಂಪನಿಯ ನಿರ್ದೇಶಕರಾಗಿದ್ದರೂ, ಈ ಸಂಗತಿಯನ್ನು ಮುಚ್ಚಿಟ್ಟಿರುವ ಕಾರಣಕ್ಕಾಗಿ 2011 - 12ನೇ ಸಾಲಿನ ತೆರಿಗೆ ಮೌಲ್ಯಮಾಪನ ವನ್ನು ಮರುತನಿಖೆ ನಡೆಸಲು ತೆರಿಗೆ ಇಲಾಖೆ ನಿರ್ಧರಿಸಿದೆ.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾವು 2010 ರಿಂದ ಯಂಗ್ ಇಂಡಿಯಾ ಕಂಪನಿಯ ನಿರ್ದೇಶಕರಾಗಿದ್ದರೂ, ಈ ಸಂಗತಿಯನ್ನು ಮುಚ್ಚಿಟ್ಟಿರುವ ಕಾರಣಕ್ಕಾಗಿ 2011 - 12ನೇ ಸಾಲಿನ ತೆರಿಗೆ ಮೌಲ್ಯಮಾಪನ ವನ್ನು ಮರುತನಿಖೆ ನಡೆಸಲು ತೆರಿಗೆ ಇಲಾಖೆ ನಿರ್ಧರಿಸಿದೆ.

ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಬುಧವಾರ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ನ್ಯಾ| ಎಸ್. ರವೀಂದ್ರ ಭಟ್ ಹಾಗೂ ಎ.ಕೆ. ಚಾವ್ಲಾ ಅವರಿದ್ದ ಪೀಠ ವಿಚಾರಣೆಯನ್ನು ಆ. 14ಕ್ಕೆ ನಿಗದಿಪಡಿಸಿದೆ. ರಾಹುಲ್ ಗಾಂಧಿ ಅವರು ಯಂಗ್ ಇಂಡಿಯಾ ಕಂಪನಿಯಲ್ಲಿ ಹೊಂದಿರುವ ಷೇರುಗಳಿಂದ ಗಳಿಸಿದ್ದು 68 ಲಕ್ಷ ರು. ಅಲ್ಲ  ಬದಲಾಗಿ 154 ಕೋಟಿ ರು. ಎಂದು ಆದಾಯ ತೆರಿಗೆ ಇಲಾಖೆ ಅಂದಾಜಿಸಿದೆ. 

ಇದು ರಾಹುಲ್ ಗಾಂಧಿಗೆ  ಸಂಕಷ್ಟ ತಂದೊಡ್ಡಿದೆ. ಇದೇ ವೇಳೆ ಆದಾಯ ತೆರಿಗೆ ನ್ಯಾಯಾಧಿಕರಣದಲ್ಲಿ ತೆರಿಗೆ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಗುರುವಾರದಂದು ನಿಗದಿಯಾಗಿರುವ ಕಾರಣಕ್ಕೆ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ರಾಹುಲ್ ಪರ ವಕೀ ಲರು ವಾದಿಸಿದ್ದರು. ಆದರೆ, ಇದಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ವಿರೋಧ ವ್ಯಕ್ತಪಡಿಸಿದ್ದರಿಂದ ಕೊರ್ಟ್ ವಿಚಾರಣೆಮುಂದೂಡಿದೆ.

click me!