107ರ ಈ ವೃದ್ಧೆಯ ಜನ್ಮ ದಿನಕ್ಕೆ ಬಯಸಿದ ಉಡುಗೊರೆ ನೀಡಿದ ರಾಹುಲ್

Published : Dec 26, 2017, 01:26 PM ISTUpdated : Apr 11, 2018, 12:55 PM IST
107ರ ಈ ವೃದ್ಧೆಯ ಜನ್ಮ ದಿನಕ್ಕೆ ಬಯಸಿದ ಉಡುಗೊರೆ ನೀಡಿದ ರಾಹುಲ್

ಸಾರಾಂಶ

ಈ ಮಹಿಳೆಗೆ  ಡಿ.25ಕ್ಕೆ 107 ವರ್ಷಗಳು ತುಂಬಿದ್ದು, ಕ್ರಿಸ್ಮಸ್ ದಿನವೇ ಆಕೆಯ ಜನ್ಮದಿನವನ್ನು ಆಚರಣೆ ಮಾಡಲಾಗಿದೆ.

ನವದೆಹಲಿ (ಡಿ.26): ಈ ಮಹಿಳೆಗೆ  ಡಿ.25ಕ್ಕೆ 107 ವರ್ಷಗಳು ತುಂಬಿದ್ದು, ಕ್ರಿಸ್ಮಸ್ ದಿನವೇ ಆಕೆಯ ಜನ್ಮದಿನವನ್ನು ಆಚರಣೆ ಮಾಡಲಾಗಿದೆ.

ಈ ವೇಳೆ ಆಕೆ ಬಯಸಿದ ಉಡುಗೊರೆಯೊಂದು ದೊರಕಿದೆ. ಅದೇನು ಗೊತ್ತಾ ಕಾಂಗ್ರೆಸ್ ನೂತನ ಅಧ್ಯಕ್ಷರಾದ ರಾಹುಲ್ ಗಾಂಧಿ ತಾವೇ ಸ್ವತಃ ಕರೆ ಮಾಡಿ ಆಕೆಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮಹಿಳೆಯು ಅನೇಕ ದಿನಗಳಿಂದಲೂ ಕೂಡ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಬಯಕೆಯನ್ನು ಹೊಂದಿದ್ದರು.

ಇದರಿಂದ ಮೊಮ್ಮಗಳಾದ ಬೆಂಗಳೂರು ನಿವಾಸಿ ದೀಪಾಲಿ  ಸಿಕಂದ್  ಟ್ವೀಟ್ ಮಾಡಿ ತನ್ನ ಅಜ್ಜಿಯ ಆಸೆಯ ಬಗ್ಗೆ ತಿಳಿಸಿದ್ದರು.

ಇದನ್ನು ನೋಡಿದ ರಾಹುಲ್ ಕರೆ ಮಾಡಿದ್ದಲ್ಲದೇ, ಪ್ರತಿಯಾಗಿ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!