ಮೋದಿ 'ಭಾರತದ ಕಮಾಂಡರ್ ಇನ್ ಥೀಫ್': ರಾಹುಲ್ ವಾಗ್ದಾಳಿ!

By Web DeskFirst Published Sep 24, 2018, 4:10 PM IST
Highlights

ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ! ಮೋದಿ ಭಾರತದ ಕಮಾಂಡರ್ ಇನ್ ಥೀಫ್ ಎಂದ ರಾಹುಲ್! ಫ್ರೆಂಚ್ ಜರ್ನಲ್ ವಿಡಿಯೋ ಟ್ವೀಟ್ ಮಾಡಿದ ರಾಹುಲ್! ಫ್ರಾಂಕೊಯಿಸ್ ಹೊಲಾಂಡೆ ಸಂದರ್ಶನ ಇರುವ ವಿಡಿಯೋ

ನವದೆಹಲಿ(ಸೆ.24): ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ. ಪ್ರಧಾನಿ ಅವರನ್ನು 'ಭಾರತದ ಕಮಾಂಡರ್ ಇನ್ ಥೀಫ್' ಎಂದು ಜರೆದು ರಾಹುಲ್ ಟ್ವೀಟ್ ಮಾಡಿದ್ದಾರೆ,

ಪ್ರೆಂಚ್ ಮೂಲದ ಜರ್ನಲ್ ಒಂದರ ಇತ್ತೀಚಿನ ವರದಿಯ ವಿಡಿಯೋ ವನ್ನು ರಾಹುಲ್ ಟ್ವಿಟ್ಟರ್ ನಲ್ಲಿ  ಶೇರ್ ಮಾಡಿದ್ದಾರೆ. ಪ್ರೆಂಚ್ ಡಿಜಿಟಲ್  ವಿಡಿಯೋ ಪಬ್ಲಿಷರ್ ಈ ವಿಡಿಯೋವನ್ನು ಸೃಷ್ಟಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಜೊತೆಗೆ ನಡೆಸಿರುವ ಸಂದರ್ಶನದ ಆಯ್ದ ಭಾಗವನ್ನು ಇದರಲ್ಲಿ ವರದಿ ಮಾಡಲಾಗಿದೆ.

The sad truth about India's Commander in Thief. pic.twitter.com/USrxqlJTWe

— Rahul Gandhi (@RahulGandhi)

ವಿಡಿಯೋದಲ್ಲಿ ರಾಫೇಲ್ ಡೀಲ್ ನಲ್ಲಿ ಅನಿಲ್ ಅಂಬಾನಿ ಆಯ್ಕೆ ಮಾಡಿಕೊಳ್ಳುವಲ್ಲಿ ಫ್ರಾನ್ಸ್ ಸರ್ಕಾರದ ಪಾತ್ರವಿಲ್ಲ,  ಭಾರತ ಸರ್ಕಾರ ಸಲಹೆ ನೀಡಿದ ನಂತರ ಅಂಬಾನಿ ಜೊತೆ ಸಮಾಲೋಚನೆ ನಡೆಸಲಾಯಿತು ಎಂಬ ಹೊಲಾಂಡೆ ಹೇಳಿಕೆ ಅಡಕವಾಗಿದೆ.

click me!