
ಬೆಂಗಳೂರು(ಸೆ.02): ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ನಾಡಿನ ಸಮಸ್ತರ ಸಾಮರಸ್ಯಕ್ಕೆ ಕಾರಣವಾಗಬೇಕು. ಹಿಂದೂ, ಜೈನ್, ಸಿಖ್, ಮುಸಲ್ಮಾನ, ಕ್ರೈಸ್ತರಾದ ನಾವೆಲ್ಲರೂ ಭಾರತ ಮಾತೆ ಮಡಿಲಿನ ಮಕ್ಕಳು ಎಂದು ರಾಮಚಂದ್ರಾಪುರ ಮಠದ ಶ್ರೀಗಳು ಹೇಳಿದ್ದಾರೆ.
ಬಕ್ರೀದ್ ನಲ್ಲಿ ನಡೆಯಬಹುದಾದ ಗೋ ಹತ್ಯೆಯು ಹೀಮದೂ- ಜೈನ್ - ಸಿಖ್ಖರ ಧರ್ಮಪ್ರಜ್ಱಗೆ ಅಘಾತ ಮಾಡುವುದರ ಮೂಲಕ ಸಾಮರಸ್ಯಕ್ಕೆ ಸವಾಲಾಗಬಾರದು. ಬಕ್ರೀದ್ ಹಬ್ಬದಲ್ಲಿ ಗೋ ಹತ್ಯೆ ಮಾಡದಿರುವ ಮುಸಲ್ಮಾನರ ಒಂದೇ ಒಂದು ನಿರ್ಧಾರ ಶಾಂತಿಯ ಕ್ರಾಂತಿಯನ್ನೇ ಉಂಟು ಮಾಡಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೋವುಗಳನ್ನು ಕೊಳ್ಳುವಾಗ ನೀಡಿದ ಹಣಕ್ಕೆ ಏನು ಗತಿ? ಎಂಬ ನಿಮ್ಮ ಚಿಂತೆಯನ್ನು ನಾವು ಬಲ್ಲೆವು. ಬಲಿ ನೀಡುವುದರ ಬದಲು ದೇಶಿ ಗೋವುಗಳನ್ನು ಮಠಕ್ಕೆ ನೀಡುವುದಾದರೆ ಯೋಗ್ಯ ಮೌಲ್ಯವನ್ನು ನೀಡಿ ಪಡೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಗೋವಿಂದ ಬಲಿ ಕೈಬಿಡಿ, ವಿಶ್ವಕ್ಕೆ ಮಾದರಿಯಾಗಬಲ್ಲ ಸಹಬಾಳ್ವೆಗೆ ನಾಂದಿ ಹಾಡಿರಿ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.