
ಚಾಮರಾಜನಗರ (ಜೂ.10): ಮೇವಿಲ್ಲದೆ ಕಂಗಾಲಾಗಿರುವ ಗೋವುಗಳ ಸಂರಕ್ಷಣೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಮುಂದಾಗಿದ್ದಾರೆ. ಇದಕ್ಕಾಗಿ ಚಾಮರಾಜನಗರ ಜಿಲ್ಲೆಯ ರಾಮಾಪುರದಲ್ಲಿ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಧ್ಯಾನ್ಯಂಕುರ ಘಟಕ ಸ್ಥಾಪನೆ ಮಾಡಲಾಗಿದೆ.
ಇಲ್ಲಿ ವಿವಿಧ ರೀತಿಯ ದೇಶೀಯ ತಳಿಯ ಗೋವುಗಳನ್ನು ಸಂರಕ್ಷಿಸಿ, ರೈತರಿಗೆ ಹೆಚ್ಚಿನ ಲಾಭ ದೊರೆಯುವಂತೆ ಎರಡು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಮೇವಿಲ್ಲದೆ ಕಂಗಾಲಾಗಿರುವ ಗೋವುಗಳಿಗೆ ಧಾನ್ಯಾಂಕುರ ಘಟಕ ಸ್ಥಾಪಿಸಿ ಪ್ರತಿದಿನ ಪೌಷ್ಠಿಕ ಆಹಾರ ಒದಗಿಸುವುದು. ಹಾಗೂ ಗೋವಿನ ಹಾಲು, ಗೋಮೂತ್ರ ಹಾಗೂ ಸಗಣಿಯಿಂದ ವಿವಿಧ ರೀತಿಯ ಉತ್ಪನ್ನ ತಯಾರಿಸಿ ರೈತರಿಗೆ ಹೆಚ್ಚಿನ ಲಾಭ ತಂದು ಕೊಡುವ ಯೋಜನೆ ಅನುಷ್ಠಾನಗೊಳಿಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚಾಮರಾಜನಗರ ಜಿಲ್ಲೆಯ ರಾಮಾಪುರದಲ್ಲಿ ಧ್ಯಾನ್ಯಂಕುರ ಘಟಕ ಸ್ಥಾಪಿಸಲಾಗಿದೆ. ಇನ್ನು ಕೆಂಪಯ್ಯನಹಟ್ಟಿಯಲ್ಲಿ ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಗವ್ಯ ಉದ್ಯಮ ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ ಸ್ಥಳೀಯರು 25 ಎಕರೆ ಜಮೀನನ್ನು ಸಹ ಶ್ರೀರಾಮಚಂದ್ರಾಪುರ ಮಠಕ್ಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.