ಕಾಲೇಜಲ್ಲಿ ರ‍್ಯಾಗಿಂಗ್ : ಕರ್ನಾಟಕಕ್ಕೆ 5ನೇ ಸ್ಥಾನ

By Web DeskFirst Published Jul 24, 2018, 4:21 PM IST
Highlights
  • ಮೊದಲ ಸ್ಥಾನದಲ್ಲಿರುವ ಉತ್ತರ ಪ್ರದೇಶ
  • ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಶೋಚನೀಯ

ನವದೆಹಲಿ[ಜು.24]: ಹೈಸ್ಕೂಲ್, ಕಾಲೇಜುಗಳಲ್ಲಿ ಮುಗ್ದ ವಿದ್ಯಾರ್ಥಿಗಳನ್ನು ಚುಡಾಯಿಸುವ (ರ‍್ಯಾಗಿಂಗ್) ಘಟನೆಗಳು ಕಳೆದ 3 ವರ್ಷಗಳಲ್ಲಿ ದ್ವಿಗುಣಗೊಂಡಿದ್ದು, ಕರ್ನಾಟಕ 5ನೇ ಸ್ಥಾನದಲ್ಲಿದೆ.

ಮಾನವ ಸಂಪನ್ಮೂಲ ಇಲಾಖೆಯ ವರದಿಯ ಪ್ರಕಾರ 2015ರಲ್ಲಿ ದೇಶದಲ್ಲಿ ಒಟ್ಟು  423 ರ‍್ಯಾಗಿಂಗ್ ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆ 2017ರಲ್ಲಿ 901ಕ್ಕೆ ಏರಿಕೆ ಯಾಗಿದೆ. ಮೊದಲ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 2015ರಲ್ಲಿ 51 ರ‍್ಯಾಗಿಂಗ್ ಪ್ರಕರಣಗಳು ಜರುಗಿದ್ದವು.

ಆದರೆ, ಅವುಗಳ ಪ್ರಮಾಣ 2017ರಲ್ಲಿ 143ಕ್ಕೆ ಏರಿಕೆ ಕಂಡಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಬಿಹಾರಕ್ಕಿಂತಲೂ ಶೋಚನೀಯವಾಗಿದ್ದು, 2015ರಲ್ಲಿ ದಾಖಲಾದ 53 ರ‍್ಯಾಗಿಂಗ್  ಪ್ರಕರಣಗಳು 2017ರಲ್ಲಿ 99 ವಿದ್ಯಾರ್ಥಿಗಳು  ರಾಗಿಂಗ್‌ನ ಸಂತ್ರಸ್ತರಾಗಿದ್ದಾರೆ. ಕರ್ನಾಟಕದಲ್ಲಿ 2015ರಲ್ಲಿ 23, 2016 ರಲ್ಲಿ 24, 2017ರಲ್ಲಿ 49 ವಿದ್ಯಾರ್ಥಿಗಳಿಗೆ ಹಿಂಸೆ ನೀಡಲಾಗಿದೆ.

click me!