ನಡುರಸ್ತೆಯಲ್ಲೇ ನಿರ್ಗತಿಕನ ಗಡ್ಡ ಬೋಳಿಸಿದ ಪೊಲೀಸ್: ಕಾರಣ?

Published : Jul 24, 2018, 04:06 PM IST
ನಡುರಸ್ತೆಯಲ್ಲೇ ನಿರ್ಗತಿಕನ ಗಡ್ಡ ಬೋಳಿಸಿದ ಪೊಲೀಸ್: ಕಾರಣ?

ಸಾರಾಂಶ

ಈ ಪೊಲೀಸಪ್ಪನ ವರ್ತನೆಗೆ ಜನ ತಬ್ಬಿಬ್ಬು ನಿರ್ಗತಿಕನ ಗಡ್ಡ ಬೋಳಿಸಿದ ಪೊಲೀಸ್ ಅಧಿಕಾರಿ ಸಂದರ್ಶನಕ್ಕೆ ಹೋಗಲು ದುಡ್ಡಿಲ್ಲದವನಿಗೆ ಖಾಕಿ ಹೆಲ್ಪ್ ಮ್ಯಾಕ್‌ಡೋನಾಲ್ಡ್ ಗೆ ಸಂದರ್ಶನಕ್ಕೆ ಹೊರಟಿದ್ದ ನಿರ್ಗತಿಕ ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಭಾರೀ ಪ್ರಶಂಸೆ

ಫ್ಲೋರಿಡಾ(ಜು.24): ಎಲ್ಲ ಪೊಲೀಸರೂ ಜನಸಾಮಾನ್ಯರ ಜೊತೆ ಖಡಕ್ ಆಗಿಯೇ ವರ್ತಿಸುತ್ತಾರೆ ಅಂತಾ ನೀವು ತಿಳಿದಿದ್ದರೆ ಅದು ಖಂಡಿತ ತಪ್ಪು ಕಲ್ಪನೆ. ಫ್ಲೋರಿಡಾದ ಪೊಲೀಸ್ ಅಧಿಕಾರಿ ನಿರ್ಗತಿಕನೋರ್ವನಿಗೆ ಶೇವಿಂಗ್ ಮಾಡಿರುವ ವಿಡಿಯೋ ಇದಕ್ಕೆ ಪುಷ್ಠಿ ಒದಗಿಸಿದೆ.

ಹೌದು, ಫ್ಲೋರಿಡಾ ಪೊಲೀಸ್ ಇಲಾಖೆಯ ಅಧಿಕಾರಿ ಕಾರ್ಲಸನ್, ನಿರ್ಗತಿಕನಿಗೆ ಕೆಲಸ ಸಿಗಲಿ ಎಂಬ ಆಶಯದಿಂದ ಆತನಿಗೆ ಶೇವಿಂಗ್ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ನಿರ್ಗತಿಕನೋರ್ವ ಕೆಲಸಕ್ಕಾಗಿ ಮ್ಯಾಕ್‌ಡೋನಾಲ್ಡ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಸಂದರ್ಶನಕ್ಕಾಗಿ ಸಿದ್ಧವಾಗಲು ಆತನ ಬಳಿ ಹಣ ಕೂಡ ಇರಲಿಲ್ಲ.

ವಿಪರೀತವಾಗಿ ಬೆಳೆದ ಗಡ್ಡ ತೆಗೆಸಲು ಕೂಡ ಆತನ ಬಳಿ ಹಣ ಇರಲಿಲ್ಲ. ಇದನ್ನು ಮನಗಂಡ ಪೊಲೀಸ್ ಅಧಿಕಾರಿ ಕಾರ್ಲಸನ್, ತಾವೇ ಖುದ್ದಾಗಿ ಆತನ ಶೇವಿಂಗ್ ಮಾಡಿ ಸಂದರ್ಶನಕ್ಕೆ ಬಿಟ್ಟು ಬಂದಿದ್ದಾರೆ. ಕಾರ್ಲಸನ್ ಅವರ ಮಾನವೀಯತೆಗೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?